ಹುಬ್ಬಳ್ಳಿ: ರಾಜ್ಯ ಹಾಗೂ ದೇಶಾದ್ಯಂತ ವಕ್ಫಬೋರ್ಡ್ ವಿಚಾರವಾಗಿ ಚರ್ಚೆ, ಸಂಘರ್ಷ ನಡೆಯುತ್ತಿದೆ. ಇದು ಗಂಭೀರವಾದಂತಹ ವಿಚಾರ. ಪ್ರತಿಯೊಂದು ಆಸ್ತಿ ವಿಚಾರದಲ್ಲೂ ವೈರಸ್ ಹರಡುತ್ತಿದೆ. ವಕ್ಫ್ ಬೋರ್ಡ್‌ನ ಅತಿಕ್ರಮಣ ನಡೆಯುತ್ತಿರೋದು ದೇಶಕ್ಕೆ ಬಹುದೊಡ್ಡ ಗಂಡಾಂತರ ಬಂದಂತೆ ಭಾಸವಾಗುತ್ತಿದೆಂದು ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ಒಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೇವಲ ಕಾನೂನು ತಿದ್ದುಪಡಿ ಅಂತಾ ಹೇಳಿದೆ. ಕೇಂದ್ರ ಸರ್ಕಾರ ತಿದ್ದುಪಡಿ ಬಗ್ಗೆ ಹೇಳಿದ ಬೆನ್ನಲ್ಲೇ ಈ ರೀತಿ ವಿರೋಧ ಗಲಾಟೆ ನಡೆದಿದೆ. ಸ್ವತಂತ್ರ ಬಂದ ನಂತರ 6 ಪ್ರತಿಶತ ಇದ್ದ ಜನಸಂಖ್ಯೆ 15 ಪ್ರತಿಶತ ಆಗಿದೆ. 2047 ರಲ್ಲಿ ಭಾರತವನ್ನು ಇಸ್ಲಾಂ ದೇಶ ಮಾಡ್ತೀವಿ ಅಂತಾರೆ. ಆದ್ರೆ ಇನ್ನು 20 ವರ್ಷಗಳಲ್ಲಿ ದೇಶವನ್ನ ಇಸ್ಲಾಂ ರಾಷ್ಟ್ರವನ್ನಾಗಿ ಮಾಡುವುದರಲ್ಲಿ ಸಂಶಯವೇ ಇಲ್ಲ ಎಂದು ಕಿಡಿ ಕಾರಿದರು.
ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಂಡ ನಿರ್ಣಯ ಸರಿಯಾಗಿದೆ. ಮತಬ್ಯಾಂಕ್ , ಅಧಿಕಾರದ ದಾಹ ದಾಹದಿಂದ ಈ ರೀತಿ ಕಾಂಗ್ರೆಸ್ ಸರ್ಕಾರ ಹೇಳಿಕೆ ನೀಡುತ್ತಿದೆ. ಧಾರವಾಡ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಅರ್ಧಕ್ಕರ್ಧ ಗ್ರಾಮಗಳ ಪಹಣಿಯಲ್ಲಿ ವಕ್ಫ ಬೋರ್ಡ್ ಹೆಸರು ಸೇರಿಸಿದ್ದಾರೆ. ಇದಕ್ಕೆಲ್ಲ ಕಾರಣೀಕರ್ತರು ಕಾಂಗ್ರೆಸ್‌ನವರು. ಕಾಂಗ್ರೆಸ್ ಕೂಡಲೇ ಈ ಸಂಬಂಧ ಕ್ಷಮೆ ಕೇಳಬೇಕು. ಇದು ಅಕ್ಬರ್‌ನ ಆಡಳಿತನಾ..? ಬಾಬರ್‌ನ ಆಡಳಿತನಾ ..? ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/11/2024 02:05 pm