ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಸರ್ಕಾರದ ವಿರುದ್ದ ಅಪಪ್ರಚಾರ ಸರಿಯಲ್ಲ - ಶಾಸಕ ಕೋನರಡ್ಡಿ

ನವಲಗುಂದ : ವಕ್ಫ್ ಆಸ್ತಿ ಕುರಿತು ಸಿಎಂ ಸಿದ್ದರಾಮಯ್ಯ ಈಗಾಗಲೇ ರೈತರಿಗೆ ನೀಡಿರುವ ನೋಟಿಸ್ ಹಿಂಪಡೆದು ಉತಾರದಲ್ಲಿ ತಿದ್ದುಪಡಿ ಮಾಡಿದ್ದರೆ ಅದನ್ನು ರದ್ದು ಮಾಡಬೇಕೆಂಬ ಆದೇಶ ನೀಡಿದ್ದರೂ ಬಿಜೆಪಿ ನಾಯಕರು ನಾಟಕವಾಡಿ ಸರ್ಕಾರದ ವಿರುದ್ಧ ಸುಳ್ಳು ಆಪಾದನೆ, ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.

ತಾಲೂಕಿನ ಅಳಗವಾಡಿ ಗ್ರಾಪಂ ನೂತನ ರಾಜೀವ ಗಾಂಧಿ ಸೇವಾ ಕೇಂದ್ರದ ಕಟ್ಟಡ ಉದ್ಘಾಟಿಸಿ, ಗ್ರಾಮದಲ್ಲಿರುವ ಸಂಗೊಳ್ಳಿ ರಾಯಣ್ಣ ಮೂರ್ತಿ ಹತ್ತಿರ ಗಾರ್ಡನ್ ತರಹ ಅಭಿವೃದ್ಧಿ ಹಾಗೂ ನವಲಗುಂದ-ನರಗುಂದ ರೈತ ಬಂಡಾಯದ ರೈತ ಹುತಾತ್ಮ ಬಸಪ್ಪ ಲಕ್ಕುಂಡಿ ಅವರ ಸ್ಮಾರಕ ನವೀಕರಣ ಮಾಡಲು ರೈತರು, ಗ್ರಾಮಸ್ಥರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಯೋಜನೆ ರೂಪಿಸಿ ಕಾಮಗಾರಿ ಪ್ರಾರಂಭಿಸಲು ಸೂಚಿಸಿದರು.

ನೂತನ ಗ್ರಾಮ ಪಂಚಾಯತ ಕಚೇರಿಯನ್ನು ಸಾರ್ವಜನಿಕರು ಸರಿಯಾಗಿ ಉಪಯೋಗಿಸಿ ರಾಮ ರಾಜ್ಯದ ಕನಸುಕಂಡ ಮಹಾತ್ಮ ಗಾಂಧಿ ಅವರ ಗ್ರಾಮ ಸ್ವರಾಜ್ ಕನಸು ಜಾರಿಗೊಳಿಸಬೇಕು. ನವಲಗುಂದ ಕ್ಷೇತ್ರದ ಹೆಚ್ಚಿನ ರಸ್ತೆಗಳು ಮಳೆಯಿಂದ ಹಾಳಾಗಿದ್ದು ದುರಸ್ತಿ ಮಾಡಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಈ ವೇಳೆ ತಹಶೀಲ್ದಾರ ಸುಧೀರ ಸಾವಕಾರ, ತಾಪಂ ಇಓ ಭಾಗ್ಯಶ್ರೀ ಜಾಗೀರದಾರ, ಲೋಕೋಪಯೋಗಿ ಎಇಇ ಎಸ್.ಎನ್. ಸಿದ್ದಾಪೂರ, ಪಿ.ಆರ್.ಇ.ಡಿ. ಎಇಇ ಎಂ.ಜಿ. ಶಿಂಧೆ, ಗ್ರಾ.ಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮತ್ತು ಸದಸ್ಯರುಗಳು ಇದ್ದರು.

Edited By : PublicNext Desk
Kshetra Samachara

Kshetra Samachara

05/11/2024 02:32 pm

Cinque Terre

4.77 K

Cinque Terre

0

ಸಂಬಂಧಿತ ಸುದ್ದಿ