ಹುಬ್ಬಳ್ಳಿ: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಲೋಕಾಯುಕ್ತ ಖುದ್ದು ಹಾಜರಾಗಲು ಸಿಎಂ ಸಿದ್ದರಾಮಯ್ಯ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಅವರು ಹಾಜರಾಗಲೇಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತದಿಂದ ನೋಟಿಸ್ ಬಂದಾಗ ಯಾರೇ ಆದರೂ ಹಾಜರಾಗಲೇಬೇಕು. ಲೋಕಾಯುಕ್ತ ಎಲ್ಲದಕ್ಕಿಂತಲೂ ದೊಡ್ಡದು ಎಂದರು.
ನೋಟಿಸ್ ನಲ್ಲಿ ಕುದ್ದು ಹಾಜರಾಗಿ ಎಂದು ಹೇಳೋದು ಸಹಜ. ಸಿಎಂ ಅವರು ಕುದ್ದು ಹಾಜರಾಗಬಹುದು. ಅಥವಾ ತಮ್ಮ ಪರವಾಗಿ ವಕೀಲರನ್ನು ಕಳಿಸಬಹುದು. ಇಲ್ಲವೇ ಸಮಯ ತೆಗೆದುಕೊಳ್ಳಬಹುದು ಎಂದು ಪ್ರತಿಕ್ರಿಯೆ ನೀಡಿದರು. ಶಿಗ್ಗಾಂವಿ ವಿಧಾನಸಭೆ ಉಪಚುನಾವಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ಇಂದು ಹುಬ್ಬಳ್ಳಿಯಲ್ಲಿ ಸಭೆ ನಡೆಸಿಲ್ಲ, ಎಲ್ಲರಿಗೂ ಅವರವರ ಜವಾಬ್ದಾರಿ ಬಗ್ಗೆ ತಿಳಿಸಿದ್ದೇವೆ. ಇಂದಿನಿಂದ ಎಲ್ಲ ನಾಯಕರು ಪಾಲ್ಗೊಳ್ಳಲಿದ್ದಾರೆ. ಪ್ರಚಾರ ಕಾರ್ಯ ಮತ್ತಷ್ಟು ಚುರುಕುಗೊಳಲಿದೆ ಎಂದರು.
ಚುನಾವಣೆ ಪೂರ್ಣಗೊಳುವವರೆಗೆ ಮಂತ್ರಿಗಳು, ಶಾಸಕರು, ಮುಖಂಡರು ಶಿಗ್ಗಾಂವಿಯಲ್ಲಿಯೇ ಇರಬೇಕೆಂದು ಸಿಎಂ ಸೂಚನೆ ನೀಡಿದ್ದಾರೆ. ಇವತ್ತಿಂದ ಎಲ್ಲರೂ ಪ್ರಚಾರದಲ್ಲಿ ಧುಮುಕುತ್ತಾರೆ ಎಂದು ಹೇಳಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/11/2024 01:03 pm