ಹುಬ್ಬಳ್ಳಿ : ನಗರದ ನೀಲಿಜನ್ ರಸ್ತೆ ಜನನಿಬಿಡ ಹಾಗೂ ವಾಹಗಳ ದಟ್ಟಣೆಗಳಿಂದ ತುಂಬಿ ಹೋಗಿರುತ್ತದೆ ಹೀಗಾಗಿ ಇಲ್ಲಿ ಓಡಾಡುವ ಪಾದಾಚಾರಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿರುವ ಫುಟ್ಪಾತ್'ನ್ನು ನೀಲಿಜನ್ ರಸ್ತೆಯಲ್ಲಿನ ಅಂಗಡಿಯ ಮಾಲಕರು ಆಕ್ರಮಿಸಿ ತಮ್ಮ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಕಾರಣ ಪಾದಚಾರಿಗಳು ವಾಹನಗಳು ಓಡಾಡುವ ರಸ್ತೆಯಲ್ಲಿ ಓಡಾಡುವ ಪರಿಸ್ಥಿತಿ ಬಂದಿತ್ತು.
ನೀಲಿಜನ್ ರಸ್ತೆಯಲ್ಲಿನ ಹಾರ್ಡ್ ವೇರ್ ಶಾಪ್,ಟ್ರಾನ್ಸ್ಪೋರ್ಟ್ ಶಾಪ್ ಗಳು ಸೇರಿದಂತೆ ವಿವಿಧ ವಾಣಿಜ್ಯ ಚಟುವಟಿಕೆ ನಡೆಸುವ ಅಂಗಡಿಕಾರರು ಸಾರ್ವಜನಿಕರಿಗೆ ಓಡಾಡಲು ಇರುವ ಫುಟ್ಪಾತ್ ಗಳನ್ನು ಆಕ್ರಮಸಿಕೊಂಡು, ಆ ಜಾಗದಲ್ಲಿ ತಮ್ಮ ಸಾಮಗ್ರಿಗಳನ್ನು ಇಟ್ಟುಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಹೀಗಾಗಿ ಇಲ್ಲಿ ಓಡಾಡುವ ಪಾದಾಚಾರಿಗಳಿಗೆ ತೀರಾ ತೊಂದರೆ ಆಗುತ್ತಿತ್ತು.
ಈ ನಿಟ್ಟಿನಲ್ಲಿ ಪಾದಚಾರಿಗಳ ಸಮಸ್ಯೆ ಕಂಡ ಅಪರಾಧ ಹಾಗೂ ಸಂಚಾರಿ ವಿಭಾಗದ ಡಿಸಿಪಿ ರವೀಶ ಖುದ್ದು ನೀಲಿಜನ್ ರಸ್ತೆಯಲ್ಲಿ ಸಂಚಾರಿ ಮಾಡಿ,ಫುಟ್ಪಾತ್ ಗಳನ್ನು ಆಕ್ರಮಿಸಿದ ಅಂಗಡಿ ಸವಾರರಿಗೆ ಬಿಸಿ ಮುಟ್ಟಿಸುವ ಕಾರ್ಯವನ್ನು ಮಾಡಿದ್ದಾರೆ.ಮತ್ತೇ ಇದೆ ರೀತಿಯಾದ ಫುಟ್ಪಾತ್ ಒತ್ತುವರಿಯಾದ್ರೆ ಅಂಗಡಿ ಮಾಲಕರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುಲಾಗುತ್ತದೆ ಎಂದು ಎಚ್ಚರಿಕೆಯನ್ನು ಡಿಸಿಪಿ ರವೀಶ್ ಎಚ್ಚರಿಕೆ ನೀಡಿದ್ದಾರೆ.
ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್
Kshetra Samachara
05/11/2024 06:37 pm