ಕುಂದಗೋಳ: ವಾರದ ಆರಂಭದ ಮೊದಲ ದಿನವೇ ಸೋಮವಾರ ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿ ದಿನ ಪೂರ್ತಿ ಬೀಗ ಜಡಿದು ಬಾಗಿಲು ಹಾಕಿಕೊಂಡು ಸಾರ್ವಜನಿಕ ಸೇವೆಯಿಂದ ದೂರ ಉಳಿದಿದೆ.
ಹೌದು ! ಕುಂದಗೋಳದ ವಿವಿಧ ಇಲಾಖೆಗಳ ಸರಕಾರಿ ಸಂಕೀರ್ಣ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿ ಅಕ್ಟೋಬರ್ 4ರಂದು ಸೋಮವಾರ ದಿನ ಪೂರ್ತಿ ಸಾರ್ವಜನಿಕರಿಗೆ ಸೇವೆ ನೀಡದೆ ಬಾಗಿಲು ಹಾಕಿದ ಪರಿಣಾಮ ಜನ ಕಚೇರಿಗೆ ಬಂದು ಬೀಗ ಹಾಕಿರುವುದನ್ನೂ ಗಮನಿಸಿ ಅತ್ತ ನೋಟಿಸ್ ಬೋರ್ಡ್ ಸಹ ಖಾಲಿ ಖಾಲಿ ಇರುವುದನ್ನು ಕಂಡು ಕ್ಷಣ ಕಾಲ ಶಾಕ್ ಆದರು.
ಇನ್ನೂ ವಿಷಯವಾಗಿ ಕಾರ್ಮಿಕ ಇಲಾಖೆ ಸಿಬ್ಬಂದಿಗೆ ಕರೆ ಮಾಡಿ ಕೇಳಿದ್ರೆ ಇಂದು ಹುಬ್ಬಳ್ಳಿ ಕಚೇರಿಯಲ್ಲಿ ಮೇಲಾಧಿಕಾರಿಗಳು ಕೆಲಸ ನಿರ್ವಹಣೆ ಮಾಡಲು ಸೂಚಿಸಿದ್ದಾರೆ, ಈ ಕಾರಣ ಹುಬ್ಬಳ್ಳಿ ಕಚೇರಿಗೆ ಬಂದಿದ್ದೇವೆ ಎಂದರು.
ಹಿರಿಯ ಕಾರ್ಮಿಕ ನಿರೀಕ್ಷಕರಾದ ರಜನಿ ಹಿರೇಮಠ ಅವರನ್ನೂ ಕೇಳಿದ್ರೇ ಕುಂದಗೋಳ ಕಚೇರಿಯಲ್ಲಿ ಅಂತರ್ಜಾಲ ಸಂಪರ್ಕ ಇಲ್ಲಾ, ನಾನೇ ನಮ್ಮ ಸಿಬ್ಬಂದಿಗೆ ಹುಬ್ಬಳ್ಳಿ ಕಚೇರಿಯಲ್ಲಿ ಕರ್ತವ್ಯ ಮಾಡಲು ತಿಳಿಸಿದ್ದೇನೆ ಎಂದರು.
ಆದರೆ ಸರ್ಕಾರಿ ಕರ್ತವ್ಯದ ದಿನವೇ ತಾಲೂಕು ಮಟ್ಟದ ಸರ್ಕಾರಿ ಕಚೇರಿಯನ್ನು ಹೀಗೆ ದಿನ ಪೂರ್ತಿ ಬಂದ್ ಮಾಡಬಹುದಾ ? ಎಂಬ ಪ್ರಶ್ನೆಗೆ ಉತ್ತರ ಸಿಗಲೇ ಇಲ್ಲ.
ಒಟ್ಟಾರೆ ಕಾರ್ಮಿಕ ನಿರೀಕ್ಷಕರ ಸರ್ಕಾರಿ ಕಚೇರಿ ಸರ್ಕಾರಿ ಕರ್ತವ್ಯದ ದಿನವೇ ಯಾವುದೇ ಸೂಚನೆ ಇಲ್ಲದೆ ಬಂದ್ ಆದ್ರೆ ಕಾರ್ಮಿಕರು, ಅನಕ್ಷರಸ್ಥರು, ತಮ್ಮ ಕೆಲಸ ಬದಿಗಿಟ್ಟು ಕಚೇರಿಗಾಗಿ ಬಂದವರ ಪಾಡೇನು ?
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್, ಕುಂದಗೋಳ
Kshetra Samachara
05/11/2024 01:21 pm