ನವಲಗುಂದ: ಅಂಗವಿಕಲರನ್ನು ದೈಹಿಕವಾಗಿ, ಮಾನಸಿಕವಾಗಿ ಸದೃಢರನ್ನಾಗಿಸುವಲ್ಲಿ ಆರೈಕೆದಾರರ ಪಾತ್ರ ಮಹತ್ವದ್ದಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಜಹಗೀರದಾರ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಆರೈಕೆದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಅಂಗವಿಕಲರ ಸಾಮರ್ಥ್ಯವನ್ನು ನಿರ್ಲಕ್ಷ್ಯ ಮಾಡಬಾರದು. ಅವರ ಸಾಧನೆ ಆರೋಗ್ಯವಂತರಿಗೂ ಸ್ಫೂರ್ತಿಯಾಗಿದೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿದೇವಿ ಪಾಟೀಲ ಮಾತನಾಡಿ, ಅಂಗವಿಕಲ ಮಕ್ಕಳ ಆರೈಕೆದಾರರು ತಮ್ಮ ಸಬಲೀಕರಣಕ್ಕೆ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಬಿ.ಎಸ್.ಪಾಟೀಲ, ಹರ್ಷವರ್ಧನ ಹಂಚಿನಾಳ, ಬಸವರಾಜ ಬೆಳಹಾರ ವೇದಿಕೆಯಲ್ಲಿದ್ದರು. ಬಸವರಾಜ್ ಹೇಬಸೂರ, ಸರೋಜಾ ಮಾವಿನಕಾಯಿ, ಗಂಗಾಧರ ಬೇಂದ್ರೆ, ಮಹದೇವಪ್ಪ ಕಮತರ, ಮೈಲಾರೆಪ್ಪ ಹಡಪದ, ಬಸವರಾಜ ಮುಂದಿನಮನಿ, ಪಕ್ಕೀರಪ್ಪ ಹಮ್ಮನ್ನವರ, ಯೋಗೀಶ ಕುರಿಹಟ್ಟಿ, ಸಂಗೀತಾ ಚಿಕ್ಕಣ್ಣವರ ಇದ್ದರು.
Kshetra Samachara
06/11/2024 01:14 pm