ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಲಕ್ಷ ಲಕ್ಷ ಹಣ ಪಡೆದು ತಾಲೂಕು ಪಂಚಾಯಿತಿ ಗಪ್ ಚುಪ್ ! ಜನರಿಂದ ಛೀ ಥೂ..

ಕುಂದಗೋಳ : ವಿವಿಧ ಇಲಾಖೆಗಳ ಸರ್ಕಾರಿ ಸಂಕೀರ್ಣ ಕಟ್ಟಡದಲ್ಲಿರುವ 5 ಇಲಾಖೆಗಳಿಂದ ವಾರ್ಷಿಕ 50 ಲಕ್ಷ ಮೀರಿ ನಿರ್ವಹಣೆ ವೆಚ್ಚ ಪಡೆಯುವ ತಾಲೂಕು ಪಂಚಾಯಿತಿ ಅಧಿಕಾರಿಗಳು ಹಣ ಪಡೆದು ನಿರ್ವಹಣೆಯನ್ನು ಮರೆತು ಕೈ ಕಟ್ಟಿ ಕೂತಿದ್ದಾರೆ.

2017 ರಲ್ಲಿ ಲೋಕೋಪಯೋಗಿ ಇಲಾಖೆ 7 ಕೋಟಿ 64 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ವಿವಿಧ ಇಲಾಖೆಗಳ ಸರ್ಕಾರಿ ಸಂಕೀರ್ಣ ಕಟ್ಟಡದ ಜವಾಬ್ದಾರಿ ಹೊತ್ತ ತಾಲೂಕು ಪಂಚಾಯಿತಿ 2019 ರಿಂದ ಇಲ್ಲಿಯವರೆಗೆ 5 ಇಲಾಖೆಗಳಿಂದ ವಾರ್ಷಿಕ ಲಕ್ಷ ಲಕ್ಷ ನಿರ್ವಹಣೆ ವೆಚ್ಚ ಪಡೆದು ಕಟ್ಟಡದ ನಿರ್ವಹಣೆಯನ್ನೇ ಕೈ ಬಿಟ್ಟಿದೆ.

ಇದಕ್ಕೆ ಸಾಕ್ಷಿ ವಿವಿಧ ಇಲಾಖೆಗಳ ಸರ್ಕಾರಿ ಸಂಕೀರ್ಣ ಕಟ್ಟಡ ಸುತ್ತ ಕಲುಷಿತ ನೀರು ಸಂಗ್ರಹವಾಗಿ ಇಲಾಖೆಯ ಪಾರ್ಕಿಂಗ್ ಜಾಗ, ಮೆಟ್ಟಿಲುಗಳು ಮುಳುಗಿ ಹೋಗಿ ಹಾವು, ಚೇಳು, ಸೊಳ್ಳೆಗಳ ಕಾಟ ಹೆಚ್ಚಿದೆ, ಇನ್ನೂ ಇಲಾಖೆ ಸುತ್ತ ಕಸ, ಕಡ್ಡಿ ಬೆಳೆದಿದೆ, ಮುಖ್ಯವಾಗಿ ಕಟ್ಟಡದಲ್ಲಿ ಸಂಗ್ರಹವಾದ ಕಲುಷಿತ ನೀರನ್ನು ಹೊರಹಾಕುವ ಕೆಲಸವನ್ನು ತಾಲೂಕು ಪಂಚಾಯಿತಿ ಸ್ಥಗಿತ ಮಾಡಿದ ಪರಿಣಾಮ 5 ಇಲಾಖೆ ಅಧಿಕಾರಿ ಸಿಬ್ಬಂದಿ ಜೀವ ಭಯದಲ್ಲೇ ಇದ್ದಾರೆ.

ಇದಲ್ಲದೆ 5 ಇಲಾಖೆಗಳಿಂದ ಮಾಸಿಕ 42.985 ರೂಪಾಯಿ ನಿರ್ವಹಣೆ ವೆಚ್ಚ ಪಡೆಯುವ ತಾಲೂಕು ಪಂಚಾಯಿತಿ ಆ ಹಣವನ್ನು ಯಾವುದಕ್ಕೆ ವ್ಯಯಿಸುತ್ತಿದೆ ಎಂಬುದು ಪ್ರಶ್ನೆಯಾಗಿದೆ ?

5 ಇಲಾಖೆ ಒಳಗೊಂಡ ವಿವಿಧ ಇಲಾಖೆಗಳ ಸರ್ಕಾರಿ ಸಂಕೀರ್ಣ ಶೌಚಾಲಯ ಸಹ ಗಬ್ಬೆದ್ದು, ಹೋಗಿ ಕಚೇರಿ ಬೀದಿ ನಾಯಿಗಳ ಸ್ಥಳವಾದರೂ ತಾಲೂಕು ಪಂಚಾಯಿತಿ ಮಾತ್ರ ಸುಮ್ಮನೆ ಇದ್ರೂ ಕಚೇರಿಗೆ ಬರುವ ಜನ ಛೀ...ಥೂ... ಎನ್ನುತ್ತಿದ್ದಾರೆ.

ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ

Edited By : Manjunath H D
Kshetra Samachara

Kshetra Samachara

05/11/2024 04:24 pm

Cinque Terre

12.05 K

Cinque Terre

2

ಸಂಬಂಧಿತ ಸುದ್ದಿ