ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಜೋಗಿಮಟ್ಟಿ ಅರಣ್ಯಕ್ಕೆ ನಿಸರ್ಗ ಪ್ರಿಯರ ಲಗ್ಗೆ

ಚಿತ್ರದುರ್ಗ- ಕೋಟೆ ನಾಡು ಚಿತ್ರದುರ್ಗದಲ್ಲಿರುವ ಜೋಗಿಮಟ್ಟಿ ಅರಣ್ಯ ಪ್ರದೇಶ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಬೆಳಗಿನ ಜಾವ ಹಿಮವನ್ನೇ ಹೊದ್ದು ಪ್ರಕೃತಿ ಸೌಂದರ್ಯ ಆರಾಧಕರನ್ನು ತನ್ನೆಡೆಗೆ ಕೈ ಬೀಸಿ ಕರೆಯುತ್ತಿದೆ. ಮಧ್ಯ ಕರ್ನಾಟಕದ ಊಟಿ ಎಂದೇ ಕರೆಯಲ್ಪಡುವ ಕೋಟೆ ನಾಡು ಚಿತ್ರದುರ್ಗದ ಜೋಗಿಮಟ್ಟಿ ಅರಣ್ಯ ಧಾಮ, ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.

ಇನ್ನು ಬೆಳಗಿನ ಜಾವ ಜೋಗಿಮಟ್ಟಿ ಅರಣ್ಯ ಹಿಮದ ಆಚ್ಛಾದನ ಮಾಡುವ ರೀತಿಯನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು. ಪ್ರಕೃತಿಯ ಈ ಸೌಂದರ್ಯವನ್ನು ಆಸ್ವಾದಿಸಲು ನಿಸರ್ಗ ಪ್ರೇಮಿಗಳು, ಚಾರಣ ಪ್ರಿಯರು ಜೋಗಿಮಟ್ಟಿ ಅರಣ್ಯಧಾಮಕ್ಕೆ‌ಲಗ್ಗೆ ಇಡುತ್ತಿದ್ದಾರೆ. ವಾರಾಂತ್ಯಕ್ಕೆ ತಮ್ಮ ಕುಟುಂಬ ಸಮೇತರಾಗಿ ಜೋಗಿಮಟ್ಟಿ ನಿಸರ್ಗ ಸೌಂದರ್ಯಕ್ಕೆ ಲಗ್ಗೆ ಇಡುವ ಚಾರಣ ಪ್ರಿಯರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಖತ್ ಎಂಜಾಯ್ ಮಾಡ್ತಾರೆ. ಇನ್ನು ಇಲ್ಲೇ ಪಕ್ಕದಲ್ಲಿ ಧುಮ್ಮಿಕ್ಕುವ ಹಿಮತ್ ಗಿರಿ ಕೇದಾರ ಫಾಲ್ಸ್ ಚಾರಣ ಪ್ರಿಯರ ಮನಸೂರೆಗೊಳ್ಳುತ್ತೆ. ಕಡಿದಾದ ದಾರಿಯ‌ ಮಧ್ಯೆ ಚಿಕ್ಕ ಮಕ್ಕಳು ಸೇರಿದಂತೆ ವೃದ್ಧರೂ ಕೂಡ ಈ ಫಾಲ್ಸ್ ಕಣ್ತುಂಬಿಕೊಳ್ಳದೇ ಇರಲಾರರು.

Edited By : Ashok M
PublicNext

PublicNext

21/10/2024 08:07 pm

Cinque Terre

30.78 K

Cinque Terre

0

ಸಂಬಂಧಿತ ಸುದ್ದಿ