ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಬರದನಾಡಲ್ಲಿ ಅಬ್ಬರಿಸಿದ ಮಳೆ - ಕೆರೆ ಕಟ್ಟೆ ಭರ್ತಿ, ಅವಾಂತರ ಸೃಷ್ಟಿ

ಚಿತ್ರದುರ್ಗ: ಬರದನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ವರುಣನ ಯಾತ್ರೆ ಮುಂದುವರೆದಿದೆ. ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗಜ್ಜುಗನಹಳ್ಳಿ ಬಳಿ ಭಾರಿ ಮಳೆಗೆ ಹಳ್ಳ ಸಂಪೂರ್ಣ ಭರ್ತಿಯಾಗಿದೆ.

ರಭಸವಾಗಿ ಹರಿಯುತ್ತಿದ್ದ ಹಳ್ಳದ ನೀರಲ್ಲಿ ಸೈಜು ಕಲ್ಲು ತುಂಬಿದ್ದ ಟ್ರಾಕ್ಟರ್ ಸಿಲುಕಿದೆ. ಇನ್ನೂ ಅದೃಷ್ಟವಶಾತ್ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ. ಮೊಳಕಾಲ್ಮೂರು ತಾಲ್ಲೂಕಿನ ನೇರ್ಲಹಳ್ಳಿ ಗ್ರಾಮದ ದಡ್ಡಯ್ಯ ಎಂಬ ಟ್ರಾಕ್ಟರ್ ಚಾಲಕ ಪಾರಾಗಿದ್ದಾನೆ. ಮತ್ತೊಂದೆಡೆ ಭಾರಿ ಮಳೆಗೆ ತಿಪ್ಪಯ್ಯನಕೋಟೆ ಗ್ರಾಮದ ಕೆರೆ ಕೂಡಾ ಕೋಡಿ ಬಿದ್ದು, ಅಪಾರ ಪ್ರಮಾಣದ ನೀರು ಹೊರಗೆ ಹರಿಯುತ್ತಿದೆ. ಅಲ್ಲದೇ ಕೆರೆ ನೀರು ತಿಪ್ಪಯ್ಯನಕೋಟೆ ಗ್ರಾಮಕ್ಕೆ ನುಗ್ಗುವ ಭೀತಿ ಕೂಡಾ ಮೂಡಿದೆ. ಮಳೆಗೆ ತಾಲ್ಲೂಕಿನ ಘಟಪರ್ತಿ ಕೆರೆ ಸಂಪೂರ್ಣ ತುಂಬಿದ್ದು, ಇದೀಗ ಕೋಡಿ ಬಿದ್ದಿದೆ. ಇನ್ನೂ ಕೋಡಿ ನೀರು ಅಪಾರ ಪ್ರಮಾಣದಲ್ಲಿ ಹೊರಗೆ ಹರಿಯುತ್ತಿದೆ.

ಇನ್ನೂ ಘಟಪರ್ತಿ ಕೆರೆ ಕೋಡಿ ಬಿದ್ದು ಹರಿಯುತ್ತಿರುವ ನೀರು ಪಕ್ಕದ ಆಂಧ್ರ ಪಾಲಾಗುತ್ತಿದೆ. ಇನ್ನೂ ಕೆರೆಯ ನೀರು BTP ಡ್ಯಾಂ ಹರಿಯುತ್ತದೆ. ಅಲ್ದೆ ಕಳೆದ ಹಲವು ದಿನಗಳಿಂದ ಬರಕ್ಕೆ ತತ್ತರಿಸಿ, ಕೆರೆ ಸಂಪೂರ್ಣ ಬತ್ತಿ ಹೋಗಿತ್ತು. ಆದರೆ ಇದೀಗ ಭರಪೂರ ಮಳೆಯಾಗಿದ್ದು, ಗಡಿ ಗ್ರಾಮದ ಕೆರೆ ಭರ್ತಿಯಾಗಿದ್ದ, ರೈತ ಸಮುದಾಯಕ್ಕೆ ಖುಷಿಯಾಗಿದೆ.

Edited By : Ashok M
PublicNext

PublicNext

22/10/2024 08:11 am

Cinque Terre

15.74 K

Cinque Terre

0

ಸಂಬಂಧಿತ ಸುದ್ದಿ