ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ತಡರಾತ್ರಿ ಮಳೆ ಅಬ್ಬರ ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ

ಚಿತ್ರದುರ್ಗ - ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ತಡರಾತ್ರಿ ಕೂಡಾ ಮಳೆ ಅಬ್ಬರಿಸಿದೆ. ಬಾರಿ ಮಳೆಯಿಂದ ಪೊಲೀಸ್ ಠಾಣೆಗೆ ಬಾರಿ ಪ್ರಮಾಣದ ನೀರು ನುಗ್ಗಿದೆ. ಭಾರಿ ನೀರು ನುಗ್ಗಿ ಇಡೀ ಠಾಣೆ ಸಂಪೂರ್ಣ ಜಲಾವೃತವಾಗಿದೆ.

ಠಾಣೆ ಒಳ ಭಾಗದಲ್ಲಿ 3 ಅಡಿಗೂ ಅಧಿಕ ಮಳೆ ನೀರು ನಿಂತಿದೆ. ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪೊಲೀಸ್ ಠಾಣೆ ರಾತ್ರಿ ಈಡೀ ಸುರಿದ ಮಳೆಯಿಂದ ಲಾಕಪ್ ಕೊಠಡಿ, PSI ರೂಂ, ಸೆಂಟ್ರಿ ರೂಂ, ಕಂಪ್ಯೂಟರ್ ರೂಂ ಸೇರಿ ಇಡೀ ಠಾಣೆ ಕೆರೆಯಂತಾಗಿದೆ. ಇನ್ನೂ ಮಳೆಯ ನೀರಿನಲ್ಲೇ ಠಾಣೆ ಸಿಬ್ಬಂದಿ ಠಾಣೆಯಲ್ಲಿನ ದಾಖಲೆ ರಕ್ಷಣೆಗೆ ಹರಸಾಹಸ ಪಡುವಂತ ಸ್ಥಿತಿ ನಿರ್ಮಾಣವಾಗಿತ್ತು. ಸತತ ಒಂದೇ ವಾರದಲ್ಲೆ ಎರಡನೇ ಬಾರಿ ಸಂಪೂರ್ಣ ಠಾಣೆ ಜಲಾವೃತ ಮಳೆಯ ನೀರಿನಲ್ಲೇ ಪೊಲೀಸರು ಡ್ಯೂಟಿ ಮಾಡುವ ಸ್ಥಿತಿ ನಿರ್ಮಾಣ ವಾಗಿದೆ.

Edited By : Ashok M
PublicNext

PublicNext

22/10/2024 09:52 am

Cinque Terre

14.13 K

Cinque Terre

0

ಸಂಬಂಧಿತ ಸುದ್ದಿ