ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಳಕಾಲ್ಮುರು: ಬಯಲು ಸೀಮೆಯಲ್ಲಿ ಮಳೆಯ ಅಬ್ಬರ

ಮೊಳಕಾಲ್ಮುರು: ಬಯಲು ಸೀಮೆಯಲ್ಲಿ ಮಳೆಯ ಅಬ್ಬರ ಜೋರಾಗಿದೆ ಕಳೆದ ರಾತ್ರಿ ಸುರಿದ ವರುಣನ ಅಬ್ಬರಕ್ಕೆ ತಾಲೂಕಿನ ಬಹುತೇಕ ಕೆರೆಕಟ್ಟೆಗಳು ಭರ್ತಿಯಾಗಿದ್ದು ಹಳ್ಳಕೊಳ್ಳಗಳು ಮೈದುಂಬಿ ಹರಿಯುತ್ತಿವೆ.

ತಾಲೂಕಿನ ಪ್ರಮುಖವಾದ ಚಿನ್ನ ಹಗರಿ ಹಳ್ಳ ಮತ್ತು ಜಿನಗಿಹಳ್ಳದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು ರಂಗಯ್ಯನದುರ್ಗ ಜಲಾಶಯದ ಒಳಹರಿವು ಹೆಚ್ಚಾಗಿದೆ.

ಚಿಕ್ಕೋಬನಹಳ್ಳಿ ಇರುವ ಬ್ಯಾರೇಜ್‌ಗಳು ಭರ್ತಿಯಾಗಿದ್ದು, ತುಪ್ಪದಕ್ಕನಹಳ್ಳಿ ಕೆರೆ,ದೇವಸಮುದ್ರ ಕೆರೆ,ಗುಂಡ್ಲೂರು ಬಿಜಿಕೆರೆಯ ಹೊಸಕೆರೆ, ಕೋನಸಾಗರ ಕೆರೆ, ಪಕ್ಕುರ್ತಿ ಕೆರೆ ಸೇರಿದಂತೆ ತಾಲೂಕಿನ ಬಹುತೇಕ ಕೆರೆಗಳು ಭರ್ತಿಯಾಗಿದ್ದು ಎಲ್ಲೆಲ್ಲೂ ಜಲರಾಶಿಯ ವೈಭೋಗ ಕಣ್ಮನ ಸೆಳೆಯುತ್ತಿದೆ. ಇನ್ನೂ ಜಲಾಶಯಕ್ಕೆ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ 5 ಟ್ರಸ್ಟ್ ಗೇಟ್ ಗಳ ಮುಖಾಂತರ ಅಪಾರ ಪ್ರಮಾಣದಲ್ಲಿ ನೀರನ್ನು ಹೊರ ಬಿಡಲಾಗುತ್ತಿದೆ.

Edited By : Ashok M
PublicNext

PublicNext

22/10/2024 11:50 am

Cinque Terre

9.75 K

Cinque Terre

0

ಸಂಬಂಧಿತ ಸುದ್ದಿ