ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಕಣ್ಣೀರು ಒರೆಸಿದ ಗಂಜಿ ಕೇಂದ್ರ- ಶಾಶ್ವತ ಪರಿಹಾರ ಎಲ್ಲಿದೆ ಸ್ವಾಮಿ?

ಕುಂದಗೋಳ: ಬೆಣ್ಣೆಹಳ್ಳದ ಪ್ರವಾಹ ಮಿತಿ ಮೀರಿದ ರಭಸಕ್ಕೆ ಮನೆಗೆ ನೀರು ನುಗ್ಗಿ ತಮ್ಮ ಮನೆ ತೊರೆದು ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದ ಪ್ರತಿಯೊಬ್ಬರದು ಒಂದೇ ಕಥೆ.

ನಮಗೆ ಶಾಶ್ವತ ಪರಿಹಾರ ಕೊಡಿ, ಸ್ವಂತ ಮನೆ ಕಟ್ಟಿ ಕೊಡಿ, ಈ ಕಳೆದ ಹತ್ತು ಹಲವಾರು ವರ್ಷಗಳಿಂದ ಪ್ರವಾಹಕ್ಕೆ ತುತ್ತಾಗುತ್ತಿರುವ ಎಲ್ಲ ಕುಟುಂಬಗಳನ್ನು ರಕ್ಷಿಸಿ ಎಂದು ಅಳಲು ಇಟ್ಟರೂ ಇಂದಿಗೂ ಪರಿಹಾರ ಮಾತ್ರ ಸಿಕ್ಕಿಲ್ಲ.

ಪ್ರಸ್ತುತ ವರ್ಷವೂ ಬೆಣ್ಣೆ ಹಳ್ಳದ ಪ್ರವಾಹದ ಆಟಾಟೋಪಕ್ಕೆ ಸಿಲುಕಿದ ಕುಟುಂಬಸ್ಥರು ಚಿಕ್ಕ ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ಉಟ್ಟ ಬಟ್ಟೆಯಲ್ಲೇ ಮನೆ ಬಿಟ್ಟು ಗಂಜಿ ಕೇಂದ್ರ ಸೇರಿದವರ ಗೋಳು ಇಲ್ಲಿದೆ...

ಒಟ್ಟಾರೆ ಜಿಲ್ಲಾಡಳಿತ ಈಗಾಗಲೇ ಕಂದಾಯ ಇಲಾಖೆ, ತಾಲೂಕು ಪಂಚಾಯಿತಿ ಸಹಯೋಗದಲ್ಲಿ ಗಂಜಿ ಕೇಂದ್ರ ತೆರೆದು ಮನೆ ಕಳೆದುಕೊಂಡ ನಿರಾಶ್ರಿತರ ಕಣ್ಣೀರು ಒರೆಸಲು ಮುಂದಾಗಿದೆ. ಆದರೆ, ಶಾಶ್ವತ ಪರಿಹಾರ ಕೊಡುವವರು ಯಾರು ? ಎಂಬ ಪ್ರಶ್ನೆಗೆ ಮಾತ್ರ ಉತ್ತರ ಅಸ್ಪಷ್ಟವಾಗಿದೆ.

- ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್

Edited By : Manjunath H D
Kshetra Samachara

Kshetra Samachara

18/10/2024 06:10 pm

Cinque Terre

8.79 K

Cinque Terre

0

ಸಂಬಂಧಿತ ಸುದ್ದಿ