ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಿಸಿಲಿನಲ್ಲಿ ಧೂಳಿನ ಮಜ್ಜನ, ಮಳೆಯಲ್ಲಿ ಕೆಸರಿನ ದರ್ಶನ, ಹುಬ್ಬಳ್ಳಿಯ ಜನರಿಗೆ ವರವೋ.? ಶಾಪವೋ.?

ಹುಬ್ಬಳ್ಳಿ: ಹುಬ್ಬಳ್ಳಿ ಜನರಿಗೆ ಅದ್ಯಾವ ಶಾಪ ಇದೆಯೋ..? ಗೊತ್ತಿಲ್ಲ. ಮಳೆ ಬಂದರೇ ಕೆಸರಾಗುವ, ಮಳೆ ಹೋದರೇ ಧೂಳಾಗುವ ಪರಿಸ್ಥಿತಿಯಲ್ಲಿಯೇ ಜನರು ಜೀವನ ನಡೆಸುವಂತಾಗಿದೆ. ಇಲ್ಲಿನ ಸಮಸ್ಯೆಗಳ ಸುಳಿಯಲ್ಲಿಯೇ ಜನರು ಜೀವನ ನಡೆಸುವಂತಾಗಿದೆ.

ಒಂದೆಡೆ ಹಲವು ವರ್ಷದಿಂದ ಆಮೆಗತಿಯಲ್ಲಿ ಸಾಗುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು.. ಮತ್ತೊಂದೆಡೆ ಹದಗೆಟ್ಟ ರಸ್ತೆಯಿಂದಾಗಿ ನಿತ್ಯ ಧೂಳಿನ ಮಜ್ಜನ.. ಈ ಸಮಸ್ಯೆಗೆ ಬೇಸತ್ತು ಬದಲಿ ಮಾರ್ಗವನ್ನು ಹುಡುಕುತ್ತಿರುವ ವಾಹನ ಸವಾರರು. ಹೌದು.. ಇದು ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿ ಪ್ರಮುಖ ವೃತ್ತವಾದ ಚೆನ್ನಮ್ಮ ಸರ್ಕಲ್, ಕೋರ್ಟ್ ಸರ್ಕಲ್ ಹಾಗೂ ಹಳೇ ಬಸ್ ನಿಲ್ದಾಣ ಸೇರಿದಂತೆ ಹುಬ್ಬಳ್ಳಿ ಪ್ರತಿಷ್ಠಿತ ಸ್ಥಳಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯ ದುಷ್ಪರಿಣಾಮವಾಗಿದೆ. ಬಿಆರ್‌ಟಿಎಸ್, ಹಳೇ ಬಸ್ ನಿಲ್ದಾಣ, ಫ್ಲೈ ಓವರ್ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗಳು ನಡೆಯುತ್ತಿರುವುದರಿಂದ ವಿಪರೀತ ಧೂಳು ಉಂಟಾಗುತ್ತಿದೆ. ಮಳೆ ಬಂದರೆ ಕೆಸರಾಗುತ್ತಿದೆ.

ಇನ್ನೂ ಆಮೆಗತಿಯ ಕಾಮಗಾರಿಯಿಂದ ಇಕ್ಕಟ್ಟಾದ ರಸ್ತೆಗಳು ಹಾಗೂ ಮತ್ತೊಂದೆಡೆ ಧೂಳಿನ ಮಜ್ಜನದಿಂದ ಬೇಸತ್ತಿರುವ ವಾಹನ ಸವಾರರು ಅಲ್ಲಲ್ಲಿ, ಸರ್ಕಸ್ ಮಾಡುವ ಮೂಲಕ ಕಂಗಾಲಾಗಿದ್ದಾರೆ. ಅಲ್ಲದೇ ಎಲ್ಲೆಂದರಲ್ಲಿ ಬಿದ್ದಿರುವ ಗುಂಡಿಗಳಿಂದ ಮಳೆಗಾಲದಲ್ಲಿ ಕೆಸರು, ಬೇಸಿಗೆಯಲ್ಲಿ ಧೂಳಿನಿಂದ ಜನರು ಒಂದಿಲ್ಲೊಂದು ಸಮಸ್ಯೆಗಳ ಸುಳಿಯಲ್ಲಿಯೇ ಜೀವನ ನಡೆಸುವಂತಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ಸೂಕ್ತ ಕಾಳಜಿ ವಹಿಸಿ ಜನರ ಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡಬೇಕಿದೆ.

ಮಲ್ಲೇಶ್ ಸೂರಣಗಿ, ಪಬ್ಲಿಕ್ ನೆಕ್ಸ್ಟ್ ,ಹುಬ್ಬಳ್ಳಿ

Edited By : Shivu K
Kshetra Samachara

Kshetra Samachara

17/10/2024 06:09 pm

Cinque Terre

74.13 K

Cinque Terre

11

ಸಂಬಂಧಿತ ಸುದ್ದಿ