ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವು ಕಚ್ಚಿದೆ ಎಂದು ಹಾವಿನ ಸಮೇತ ಆಸ್ಪತ್ರೆ ಬಂದ ವ್ಯಕ್ತಿ..!

ಬಿಹಾರದಲ್ಲಿ ವ್ಯಕ್ತಿಯೋರ್ವನಿಗೆ ರಸೆಲ್ಸ್ ಹಾವು ಕಚ್ಚಿದ್ದು, ಹಾವನ್ನು ಕುತ್ತಿಗೆಗೆ ಸುತ್ತಿಕೊಂಡು ಆಸ್ಪತ್ರೆಗೆ ಆಗಮಿಸಿ ಉಳಿದ ರೋಗಿಗಳಿಗೂ ಆತಂಕ ಹುಟ್ಟು ಹಾಕಿದ್ದಾನೆ.ಈತನನ್ನು ಪ್ರಕಾಶ್ ಮಂಡಲ್ ಎಂದು ಗುರುತಿಸಲಾಗಿದೆ.ಯಾವ ಹಾವು ಕಚ್ಚಿದೆ ಎಂದು ವೈದ್ಯರಿಗೆ ತೋರಿಸಿ ಅದಕ್ಕೆ ಸರಿಯಾದ ಚಿಕಿತ್ಸೆಯನ್ನು ಪಡೆಯಲು ಆ ವ್ಯಕ್ತಿ ಹಾವಿನ ಸಮೇತ ಆಸ್ಪತ್ರೆ ಹೋಗಿದ್ದಾನೆ.ಬಿಹಾರದ ಭಾಗಲ್ಪುರ್‌ನಲ್ಲಿ ಈ ಘಟನೆ ನಡೆದಿದೆ. ಆಗಿದ್ದು ಇಷ್ಟೇ 48 ವರ್ಷದ ದೈನಂದಿನ ಕೂಲಿಗಾರ ಮನೆಯಲ್ಲಿ ಮಲಗಿದ್ದಾಗ ವೈಪರ್ ದಾಳಿ ಮಾಡಿದೆ, ಬಲಗೈಗೆ ಹಾವು ಕಚ್ಚಿದ್ದು ಆ ವಿಷ ಹರಡದಂತೆ ತೋಳನ್ನು ಬಿಗಿಯಾಗಿ ಕಟ್ಟಿಕೊಂಡು ಬಂದಿದ್ದಾನೆ ಪುಣ್ಯಾತ್ಮ.

Edited By : Somashekar
PublicNext

PublicNext

17/10/2024 07:46 pm

Cinque Terre

97.6 K

Cinque Terre

3

ಸಂಬಂಧಿತ ಸುದ್ದಿ