ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದ್ವೇಷಿಸುವವರು ದ್ವೇಷಿಸಿ,ಪ್ರೀತಿಸುವವರು ಪ್ರೀತಿಸಿ‌, ನೆಟಿಸಾನ್ಸ್‌ ಗೆ ಮನು ಭಾಕರ್‌ ಸ್ಟ್ರಾಂಗ್‌ ಆನ್ಸರ್

2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದ ಚಾಂಪಿಯನ್ ಶೂಟರ್ ಮನು ಭಾಕರ್ ಇತ್ತೀಚೆಗೆ ಲ್ಯಾಕ್ಮೆ ಫ್ಯಾಶನ್ ವೀಕ್ 2024 ರಲ್ಲಿ ರ‍್ಯಾಂಪ್‌ ವಾಕ್‌ ಮಾಡಿದ್ದು ಇದೀಗ ಟಾಕ್‌ ಆಫ್‌ ದಿ ಟೌನ್‌ ಆಗಿದ್ದಾರೆ. ಒಂದಷ್ಟು ಜನ ಈಕೆಯ ಆತ್ಮವಿಶ್ವಾಸದ ನಡಿಗೆಯನ್ನು ಪ್ರಶಂಸಿದರೆ,ಇನ್ನೊಂದಿಷ್ಟು ಜನ ಠೀಕೆ ಮಾಡಿದ್ದಾರೆ. ರ‍್ಯಾಂಪ್‌ ವಾಕ್‌ ವೀಡಿಯೋವನ್ನು ಇನ್ಸ್ಟಾ ಗ್ರಾಂ ನಲ್ಲಿ ಶೇರ್‌ ಮಾಡಿದ ಮನು," ನಿಮ್ಮ ಒಳ್ಳೆಯ ಮಾತುಗಳಿಗೆ ಧನ್ಯವಾದಗಳು,ನಿಮ್ಮನ್ನು ಯಾವತ್ತೂ ಯಾವುದಕ್ಕೂ ಮಿತಿಗೊಳಿಸಬೇಡಿ,ದ್ವೇಷಿಗಳು ದ್ವೇಷಿಸುತ್ತಾರೆ, ಪ್ರೇಮಿಗಳು ಪ್ರೀತಿಸುತ್ತಾರೆ ನಿಮ್ಮ ಯಶಸ್ವಿಗೆ ಯಾವುದೇ ಶಾರ್ಟ್‌ ಕಟ್‌ ಇಲ್ಲ, ನಿಮ್ಮದೇ ಶೈಲಿಯಲ್ಲಿ ಸಾಧಿಸಿ" ಎಂದು ಶೀರ್ಷಿಕೆ ನೀಡಿದ್ದಾರೆ.ಇನ್ನೂ ನವೆಂಬರ್‌ನಲ್ಲಿ ತರಬೇತಿಯನ್ನು ಮತ್ತೇ ಆರಂಭಿಸಿ ಮುಂದಿನ ವರ್ಷ ಸ್ಪರ್ಧಾತ್ಮಕ ಶೂಟಿಂಗ್‌ಗೆ ಮರಳುವುದಾಗಿ ಮನು ಭಾಕರ್ ಹೇಳಿದ್ದಾರೆ.

Edited By : Somashekar
PublicNext

PublicNext

16/10/2024 06:53 pm

Cinque Terre

38.42 K

Cinque Terre

0