ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಂದು ವಾರದಿಂದ ಬೆಡ್‌ ರೆಸ್ಟ್‌ ನಲ್ಲಿರುವ ರಕುಲ್‌ ಪ್ರೀತ್‌, 80 ಕೆಜಿ ‌ ತೂಕ ಎತ್ತಿ ಎಡವಟ್ಟು

ಹೇವೀ ವರ್ಕ ಔಟ್‌ ಮಾಡಲು ಹೋಗಿ ಬೆನ್ನು ಮೂಳೆ ಸೆಳೆತಗೊಳಗಾಗಿ ಬೆಡ್‌ ಗೆ ಸೇರಿದ್ದಾರೆ ನಟಿ ರಕುಲ್‌ ಪ್ರೀತ್‌ ಸಿಂಗ್.80 ಕೆಜಿ ‌ ತೂಕವನ್ನು ಯಾವುದೇ ಬೆಲ್ಟ್‌ ಹಾಕದೇ ಎತ್ತಿದ್ದೇ ಈ ಅವಘಡಕ್ಕೆ ಕಾರಣ. ಬೆಡ್‌ ರೆಸ್ಟ್‌ ನಲ್ಲಿರುವ ರಕುಲ್‌ ಇದೀಗ ಹೆಲ್ತ್‌ ಅಪ್ಡೇಟ್‌ ಕೊಟ್ಟಿದ್ದಾರೆ." ನಾನು ವರ್ಕ ಔಟ್‌ ವಿಷಯದಲ್ಲಿ ಮೂರ್ಖತನದ ಕೆಲಸ ಮಾಡಿದ್ದೇನೆ,ನನ್ನ ದೇಹದ ಮಾತನ್ನು ನಾನು ಕೇಳಲೇ ಇಲ್ಲ, ಕಳೆದ ಆರು ದಿನಗಳಿಂದ ಬೆಡ್‌ ರೆಸ್ಟ್‌ ನಲ್ಲೇ ಇದ್ದು, ಇನ್ನೂ ಒಂದು ವಾರ ಹೀಗೆಯೇ ಇರಬೇಕೆಂದು ಡಾಕ್ಟರ್‌ ಹೇಳಿದ್ದಾರೆ.ಹಾಗಾಗಿ ನೀವೆಲ್ಲಾ ಜಿಮ್‌ ಅಲ್ಲಿ ವರ್ಕ್‌ ಔಟ್‌ ಮಾಡುವಾಗ ನಿಮ್ಮ ದೇಹದ ಮಾತನ್ನು ಕೇಳಿ" ಎಂದಿದ್ದಾರೆ.ಈಕೆಯ L4, L5, S1 ನರಗಳು ಜ್ಯಾಮ್ ಆಗಿ ರೆಸ್ಟ್‌ ನಲ್ಲಿದ್ದಾರೆ.ರಕುಲ್‌ ಕೆರಿಯರ್‌ ವಿಚಾರ ನೋಡಿದಾಗ ಸದ್ಯ ಈಕೆ ಎಸ್ ಶಂಕರ್ ನಿರ್ದೇಶನದ ಕಮಲ್ ಹಾಸನ್ ಅವರ ತಮಿಳು ಆಕ್ಷನ್-ಡ್ರಾಮಾ ಇಂಡಿಯನ್ 3 ಹಾಗೂ ನ್ಶುಲ್ ಶರ್ಮಾ ನಿರ್ದೇಶನದ ದೇ ದೇ ಪ್ಯಾರ್ ದೇ 2 ಚಿತ್ರದ ಶೂಟಿಂಗ್‌ ನಲ್ಲಿ ಬ್ಯುಸಿ ಇದ್ದಾರೆ.

Edited By : Somashekar
PublicNext

PublicNext

17/10/2024 07:43 pm

Cinque Terre

33.84 K

Cinque Terre

0