ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿತ್ಯಾನಂದನ ಕೈಲಾಸದ ರಾಯಭಾರಿಯಾಗಿ ವಿಶ್ವಸಂಸ್ಥೆಯಲ್ಲಿ ಮಾತನಾಡಿದ ವಿಜಯಪ್ರಿಯಾ ನಿತ್ಯಾನಂದ, ಭಾರತದಿಂದ ಕಿರುಕುಳದ ಆರೋಪ

ವಿಜಯಪ್ರಿಯಾ ನಿತ್ಯಾನಂದ, ನಿತ್ಯಾನಂದನ ಕೈಲಾಸದ ರಾಯಭಾರಿ ಜಿನೀವಾದಲ್ಲಿ ವಿಶ್ವಸಂಸ್ಥೆಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ವೀಡಿಯೋ ಎಲ್ಲೆಡೆ ವೈರಲ್‌ ಆಗಿದ್ದು, ಯಾರು ಈ ಮಹಿಳೆ ಅನ್ನುವುದೇ ಎಲ್ಲರಿಗೂ ಪ್ರಶ್ನೆಯಾಗಿದೆ.ಆಕೆಯ ವೀಡಿಯೋ ವನ್ನು ನಿತ್ಯಾನಂದ ಹಂಚಿಕೊಂಡಿದ್ದರು."ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ" ಸ್ಥಾಪಿಸಿರುವ ತಮಿಳುನಾಡಿನ ಸ್ವಯಂ ಘೋಷಿತ ದೇವ ಮಾನವ, ಭಾರತದಿಂದ ಪರಾರಿಯಾಗಿದ್ದಾನೆ.ಈತನ ಕೈಲಾಸ ಎಲ್ಲಿದೆ ಎಂದು ಈವರೆಗೂ ಯಾರಿಗೂ ತಿಳಿದಿಲ್ಲ.

ವಿಶ್ವಸಂಸ್ಥೆಯ ಸಭೆಯಲ್ಲಿ ಮಾತನಾಡಿದ ಈಕೆ, ಕೈಲಾಸವನ್ನು ಒಂದು ದೇಶವನ್ನಾಗಿ ಪರಿಗಣಿಸಬೇಕು ಎಂದಿದ್ದಾರೆ ಹಾಗೂ ಗುರು ನಿತ್ಯಾನಂದ ಅವರನ್ನು ಭಾರತ ಹಿಂಸಿಸುತ್ತಿದೆ ಎಂದಿದ್ದಾರೆ.ಹಾಗೆನೇ ಕೈಲಾಸ ಭಾರತವನ್ನು ಗೌರವಿಸುತ್ತದೆ ಹಾಗೂ ನಿತ್ಯಾನಂದ ಮತ್ತು ಕೈಲಾಸ ವಿರುದ್ಧ ದಾಳಿ ಮಾಡುವ ಮತ್ತು ಹಿಂಸಾಚಾರವನ್ನು ಪ್ರಚೋದಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಜಿನೇವಾದಲ್ಲಿನ ಆಕೆಯ ಮಾತುಗಳು ಅಪ್ರಸ್ತುತ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಕಚೇರಿ ಸ್ಪಷ್ಟಪಡಿಸಿದೆ.

ಅಂದ ಹಾಗೆ ಈಕೆ US ನಲ್ಲಿ ವಾಸಿಸುತ್ತಿದ್ದಾರೆ, 2014 ರಲ್ಲಿ ಕೆನಡಾದ ಮ್ಯಾನಿಟೋಬಾ ವಿಶ್ವವಿದ್ಯಾಲಯದಿಂದ ಮೈಕ್ರೋಬಯಾಲಜಿಯನ್ನು ಅಧ್ಯಯನ ಮಾಡಿದ್ದಾರೆ.ಇಂಗ್ಲಿಷ್, ಫ್ರೆಂಚ್, ಕ್ರಿಯೋಲ್ ಮತ್ತು ಪಿಜಿನ್ಸ್ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲವರಾಗಿದ್ದಾರೆ.

Edited By : Somashekar
PublicNext

PublicNext

17/10/2024 07:42 pm

Cinque Terre

30.07 K

Cinque Terre

0