ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಾಳಿ ಕಟ್ಟಲು ಬಿಡದ ವಧು, ಮದುವೆಯೇ ಕ್ಯಾನ್ಸಲ್

ಮದುವೆ ಅನ್ನುವ ಪವಿತ್ರ್ಯ ಬಾಂಧವ್ಯ ಗಂಡು ಹೆಂಡತಿಯ ಒಪ್ಪಿಗೆಯ ಮೇಲೆ ನಡೆಯುವಂತದ್ದು,ಆದರೆ ಈ ವೀಡಿಯೋದಲ್ಲಿ ವಧು ತಾಳಿ ಕಟ್ಟುವ ವೇಳೆ ನನಗೆ ಮದುವೆ ಬೇಡವೆಂದು ಹುಡುಗನನ್ನು ತಿರಸ್ಕಾರ ಮಾಡಿದ್ದಾಳೆ.ಸಂಬಂಧಿಕರೆಲ್ಲಾ ಸೇರಿಕೊಂಡು ಎಷ್ಟೇ ಸಮಧಾನ ಮಾಡಲು ಪ್ರಯತ್ನ ಪಟ್ಟರು ವಧು ಮಾತ್ರ ಮನಸ್ಸಿಗೆ ಒಲ್ಲದ ಹುಡುಗನನ್ನು ಮದುವೆಯಾಗುವುದಿಲ್ಲ ಎಂದು ಹಠ ಹಿಡಿದಿದ್ದಾಳೆ, ವರನು ತಾಳಿ ಕಟ್ಟಲು ತಾಳ್ಮೆಯಿಂದ ಕಾಯುತ್ತ ಅಲ್ಲೇ ನಿಂತಿರುವ ದೃಶ್ಯ ಕಂಡುಬಂತು. ವಧುವಿನ ಆಘಾತಕಾರಿ ನಿರ್ಧಾರ ಕ್ಯಾಮರಾದಲ್ಲಿ ಸೆರೆಯಾಗಿದೆ.ಇದು ಕರ್ನಾಟಕದ ಸಣ್ಣ ಪಟ್ಟಣದಲ್ಲಿ ಎಂದು ವರದಿಯಾಗಿದೆ.ಈ ವಧು ವರನ ವೈರಲ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಅಟೆಂನ್ಷನ್‌ ಗ್ರ್ಯಾಬ್‌ ಮಾಡುತ್ತಿದೆ.

Edited By : Somashekar
PublicNext

PublicNext

16/10/2024 06:43 pm

Cinque Terre

42.08 K

Cinque Terre

3