ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕ್ಷಮೆ ಕೇಳಿದ್ರೆ ಸಲ್ಲುನ ಸಾಯಿಸಲ್ಲ : ಲಾರೆನ್ಸ್ ಬಿಷ್ಣೋಯ್

ಅಕ್ಟೋಬರ್ 2ರಂದು ಮುಂಬೈನಲ್ಲಿ ನಡೆದ ಎನ್ ಸಿಪಿ ನಾಯಕ, ಮಾಜಿ ಸಚಿವ ಬಾಬಾ ಸಿದ್ದಿಕಿಯವರ ಕೊಲೆ ಪ್ರಕರಣ ಇಡೀ ಭಾರತವನ್ನೇ ಬೆಚ್ಚಿ ಬೀಳಿಸಿದೆ. ಈ ಕುಕೃತ್ಯದ ಹೊಣೆಯನ್ನು ಲಾರೆನ್ಸ್ ಬಿಷ್ಣೋಯಿ ಎಂಬ ಗ್ಯಾಂಗ್ ಹೊತ್ತುಕೊಂಡಿದೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಸಹಾಯ ಮಾಡಿದ್ದಕ್ಕಾಗಿ ಸಿದ್ದಿಕಿಯವರನ್ನು ಕೊಂದಿದ್ದಾಗಿ ಗ್ಯಾಂಗ್ ಹೇಳಿದ್ದು, ಖಾನ್ ಗೆ ಸಹಾಯ ಮಾಡುವ ಯಾರನ್ನೂ ಬಿಡೋದಿಲ್ಲ ಎಂದು ಎಚ್ಚರಿಕೆ ನೀಡಿದೆ. ಜೊತೆಗೆ ಮುಂದಿನ ಗುರಿ ಸಲ್ಮಾನ್ ಖಾನ್ ಎಂದಿದೆ.

2008 ರಲ್ಲಿ ಮೊದಲ ಬಾರಿಗೆ ಲಾರೆನ್ಸ್ ಬಿಷ್ಣೋಯಿ, ತಾನು ಸಲ್ಮಾನ್ ಖಾನ್ ಅನ್ನು ಕೊಲ್ಲುವುದಾಗಿ ಹೇಳಿದ್ದ. ಅಂದಿನಿಂದ ಇಂದಿನ ವರೆಗೂ ಪ್ರಯತ್ನ ಮಾಡುತ್ತಲೇ ಇದ್ದಾನೆ. ಸಲ್ಮಾನ್ ಖಾನ್ ಅನ್ನು ಕೊಂದೇ ತೀರುತ್ತೇನೆ ಎಂದು ಲಾರೆನ್ಸ್ ಹೇಳಿಕೊಂಡಿದ್ದಾನೆ. ಆದರೆ ಸಲ್ಮಾನ್ ಖಾನ್ ತಾನು ಹೇಳಿದ ಒಂದು ಕೆಲಸ ಮಾಡಿದರೆ ಆತನನ್ನು ಜೀವಂತ ಬಿಡುವುದಾಗಿ ಹೇಳಿದ್ದಾನೆ.

ಕೆಲ ವರ್ಷಗಳ ಹಿಂದಿನಿಂದಲೂ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯಿ, ಜೈಲಿನ ಒಳಗಿನಿಂದಲೇ ವಿಡಿಯೋ ಕಾಲ್ ಮೂಲಕ ಎಬಿಪಿ ಚಾನೆಲ್​ಗೆ ಸಂದರ್ಶನ ನೀಡಿದ್ದ. ಆ ಸಮಯದಲ್ಲಿ ‘ಸಲ್ಮಾನ್ ಖಾನ್ ಅನ್ನು ಕೊಲ್ಲುವುದೇ ನನ್ನ ಜೀವನದ ಗುರಿ’ ಎಂದಿದ್ದ. ಅದೇ ಸಂದರ್ಶನದಲ್ಲಿ, ಸಂದರ್ಶಕ, ‘ಈ ರಕ್ತಪಾತ ಆಗದೆ ಇರಬೇಕೆಂದರೆ ಸಲ್ಮಾನ್ ಖಾನ್ ಏನು ಮಾಡಬೇಕು? ಹೇಗೆ ಸಲ್ಮಾನ್ ಖಾನ್ ಕ್ಷಮೆ ಕೇಳಬಹುದು?’ ಎಂದು ಪ್ರಶ್ನೆ ಮಾಡಿದ್ದರು.

ಅದಕ್ಕೆ ಉತ್ತರಿಸಿದ್ದ ಲಾರೆನ್ಸ್ ಬಿಷ್ಣೋಯಿ, ‘ನಮ್ಮ ಬಿಷ್ಣೋಯಿಗಳ ದೇವಾಲಯ ಮುಕ್ತಿಧಾಮ ಮುಕಾಮ್ ರಾಜಸ್ಥಾನದ ಬಿಕಾನೆರ್ ಜಿಲ್ಲೆಯ ನೋಕಾ ತೆಹಶಿಲ್​ನಲ್ಲಿದೆ, ಅಲ್ಲಿಗೆ ಹೋಗಿ ಕ್ಷಮೆ ಕೇಳಿ ಬಿಡಲಿ ಸಾಕು. ನನ್ನಿಂದ ತಪ್ಪಾಗಿದೆ, ಆಗದೆಯೂ ಇರಬಹುದು ಆದರೆ ಆರೋಪ ಬಂದಿದೆ. ನನ್ನಿಂದ ಈ ಸಮುದಾಯದ ಮನೋಭಾವನೆಗೆ ಧಕ್ಕೆ ಬಂದಿದೆ ಹಾಗಾಗಿ ಕ್ಷಮೆ ಕೇಳುತ್ತೇನೆ ಎಂದು ಆ ದೇವಸ್ಥಾನದಲ್ಲಿ ನಿಂತು ಹೇಳಲಿ ಸಾಕು, ನಾನು ಆತನನ್ನು ಬಿಟ್ಟುಬಿಡುತ್ತೇನೆ. ಆತನನ್ನು ಕೊಲ್ಲುವ ಪ್ರಯತ್ನ ಮಾಡುವುದಿಲ್ಲ’ ಎಂದಿದ್ದ ಲಾರೆನ್ಸ್ ಬಿಷ್ಣೋಯಿ.

ಬಹುತೇಕರಿಗೆ ತಿಳಿದಿರುವಂತೆ ಸಲ್ಮಾನ್ ಖಾನ್ ಮೇಲೆ ಕೃಷ್ಣಮೃಗವನ್ನು ಕೊಂದ ಆರೋಪ ಇದೆ. ಕೃಷ್ಣಮೃಗ ಬಿಷ್ಣೋಯಿ ಸಮುದಾಯದ ಪಾಲಿಗೆ ದೇವರು. ತಮ್ಮ ದೇವರನ್ನು ಕೊಂದಿದ್ದಾರೆ ಎಂದು ಆರೋಪಿಸಿ ಬಿಷ್ಣೋಯ ಸಮುದಾಯಕ್ಕೆ ಸೇರಿದ ಪಾತಕಿ ಲಾರೆನ್ಸ್ ಬಿಷ್ಣೋಯಿ ಸಲ್ಮಾನ್ ಖಾನ್ ಅನ್ನು ಕೊಲ್ಲುವ ನಿರ್ಣಯ ಮಾಡಿದ್ದ.

Edited By : Nirmala Aralikatti
PublicNext

PublicNext

18/10/2024 08:15 am

Cinque Terre

74.8 K

Cinque Terre

19

ಸಂಬಂಧಿತ ಸುದ್ದಿ