ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ಮಳೆಯಿಂದ ಸೂರು ಕಳೆದುಕೊಂಡ ತಾಯಿಗೆ ಬೇಕಿದೆ ಸಹಾಯ ಹಸ್ತ

ಕಲಘಟಗಿ : ಕಲಘಟಗಿ ಪಟ್ಟಣದ ಗಾಂಧಿನಗರದ ನಿವಾಸಿಯಾದ ಮಂಜವ್ವ ಕೊಲ್ಲಾಪುರ ಎನ್ನುವ ತಾಯಿಯ ಕಷ್ಟ ನೋಡಿದರೆ ಎಂತಹವರಿಗೂ ಒಂದು ಕ್ಷಣ ಕಣ್ಣೀರು ಬರದೇ ಇರಲಾರದು.

ಹಲವಾರು ವರ್ಷಗಳಿಂದ ಈ ತಾಯಿ ಒಂದು ಚಿಕ್ಕ ಮನೆಯಲ್ಲಿ ವಾಸವಾಗಿದ್ದು ಬೇಡಿಕೊಂಡು ಬಂದು ಅಂಗವಿಕಲ ಮಗನ ಜೊತೆ ಜೀವನ ನಡೆಸುತ್ತಿದ್ದಾಳೆ.

ಆದರೆ ಈ ಬಾರಿ ಅತಿಯಾದ ಮಳೆ ಇಂದಾಗಿ ಈಗಿರುವ ಮನೆ ಕೂಡ ಬಿದ್ದಿದ್ದು ತಾಯಿ-ಮಗ ಇಬ್ಬರು ಅಂತಹ ಮನೆಯಲ್ಲಿ ಜೀವನ ಕಳೆಯುತ್ತಿದ್ದಾರೆ. ಅಪ್ಪಟ ಅಯ್ಯಪ್ಪ ಸ್ವಾಮಿಯ ಭಕ್ತೆ ಇವಳಾಗಿದ್ದು ಮನೆಯ ಗೋಡೆಯ ತುಂಬಾ ಅಯ್ಯಪ್ಪನ ಫೋಟೋ ಇಟ್ಟು ಪೂಜೆ ಮಾಡುತ್ತಿರೋದು ನೋಡಿದರೆ ಆ ಅಯ್ಯಪ್ಪನು ಇವಳಿಗೆ ಕರುಣೆ ತೋರದೆ ಇರೋದು ವಿಪರ್ಯಾಸವಾಗಿದೆ.

ಆಸರೆಯಾಗಿದ್ದ ಈ ಒಂದು ಪುಟ್ಟ ಮನೆ ಬಿದ್ದಿರುವ ಕಾರಣ ಬೇರೆ ಎಲ್ಲೂ ಆಸರೆ ಇಲ್ಲದೆ ಜೀವದ ಹಂಗು ತೊರೆದು ಅದೇ ಮನೆಯಲ್ಲಿ ವಾಸವಾಗಿರೋದು ನೋಡಿದರೆ ಮನ ಕಲುಕುವಂತಿದೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕರು ಮತ್ತು ಸಚಿವರಾದಂತ ಸಂತೋಷ್ ಲಾಡ್ ಇತ್ತ ಕಡೆ ಗಮನ ಹರಿಸಿ ಈ ತಾಯಿಗೆ ಸೂರು ಕಲ್ಪಿಸಿ ಕೊಡಬೇಕಾಗಿದೆ.

ವರದಿ : ಉದಯ ಗೌಡರ, ಪಬ್ಲಿಕ್ ನೆಕ್ಸ್ಟ್, ಕಲಘಟಗಿ

Edited By : Somashekar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

18/10/2024 12:15 pm

Cinque Terre

16.63 K

Cinque Terre

0

ಸಂಬಂಧಿತ ಸುದ್ದಿ