ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಯಶಸ್ಸು ಕಂಡ ವಾಲ್ಮೀಕಿ ಜಯಂತಿ ! ಭವನ ನಿರ್ಮಾಣಕ್ಕೆ ಶೀಘ್ರ ಅಸ್ತು

ಕುಂದಗೋಳ : ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣ ಗ್ರಂಥದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತ ತತ್ತ್ವಗಳಿವೆ ನಾವು ಸಹ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ರಾಜು ಮಾವರಕರ ಹೇಳಿದರು.

ಅವರು ಸವಾಯಿ ಗಂಧರ್ವ ಸಭಾಭವನದಲ್ಲಿ ತಾಲ್ಲೂಕಾಡಳಿತ, ತಾಲ್ಲೂಕು ಪಂಚಾಯತ್, ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ್ರು. ವಾಲ್ಮೀಕಿ ಸಮುದಾಯ ಕಟ್ಟಡ ನಿರ್ಮಾಣ ಮಾಡಲು ಎಸ್.ಟಿ ಸಮುದಾಯದವರು ಮನವಿ ನೀಡಿದ್ದು, ಇದನ್ನು ಜಿಲ್ಲಾ ಮಟ್ಟದಲ್ಲಿ ಚರ್ಚೆ ಮಾಡಲಾಗಿದ್ದು ಶೀಘ್ರದಲ್ಲೇ ಅದಕ್ಕೆ ಅನುವು ಮಾಡಲಾಗುತ್ತದೆ ಎಂದರು.

ತಾಲ್ಲೂಕು ಎಸ್.ಟಿ ಸಮುದಾಯದ ಅಧ್ಯಕ್ಷ ರಾಜು ದೊಡ್ಡಶಂಕರ ಮಾತನಾಡಿ, ಕುಂದಗೋಳ ಪಟ್ಟಣದಲ್ಲಿ ಈಗಾಗಲೇ ಪಟ್ಟಣ ಪಂಚಾಯಿತಿಯಲ್ಲಿ ಈ ಹಿಂದೆ ಸಮುದಾಯದ ಭವನ ನಿರ್ಮಾಣ ಮಾಡಲು ಠರಾವು ಪಾಸ್ ಮಾಡಲಾಗಿದ್ದು. ಇದು ಮುಂದಿನ ದಿನಮಾನಗಳಲ್ಲಿ ಜಾಗ ಗುರುತಿಸಿ ಸಮುದಾಯ ಭವನ ನಿರ್ಮಾಣ ಮಾಡಲು ಅನೂಕೂಲ ಮಾಡಿಕೊಡಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಆಧಿಕಾರಿ ಜಗದೀಶ್ ಕಮ್ಮಾರ, ಹಾಗೂ ಸಂಶಿ ಗ್ರಾ.ಪಂ ಅಧ್ಯಕ್ಷ ರಾಜು ಪುಟ್ಟಣ್ಣನವರ ಮಾತನಾಡಿದರು.

ಎಸ್.ಟಿ ಸಮುದಾಯದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿಭಾಗ ಸೇರಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕುಂದಗೋಳ ಪಟ್ಟಣದ ತಹಶಿಲ್ದಾರ್ ಕಚೇರಿಯಿಂದ ಸವಾಯಿ ಗಂಧರ್ವ ಸ್ಮಾರಕ ಭವನದ ವರಗೆ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರ ದೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೆರವಣಿಗೆ ಟ್ರ್ಯಾಕ್ಟರ್ ಚಲಾಯಿಸಿ ತಹಶೀಲ್ದಾರ್ ರಾಜು ಮಾವರಕರ ಚಾಲನೆ ಕೊಟ್ಟರು.

ಈ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿದಂತೆ ಮಹರ್ಷಿ ವಾಲ್ಮೀಕಿ ಆರಾಧಕರು, ಸಮುದಾಯದವರು ಉಪಸ್ಥಿತರಿದ್ದರು.

Edited By : Somashekar
Kshetra Samachara

Kshetra Samachara

18/10/2024 02:45 pm

Cinque Terre

8.69 K

Cinque Terre

0

ಸಂಬಂಧಿತ ಸುದ್ದಿ