ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಮಳೆ ಆರ್ಭಟಕ್ಕೆ ತಾಲೂಕಿನಲ್ಲಿ 40 ಮನೆಗಳಿಗೆ ಭಾಗಶಃ ಹಾನಿ !

ಕುಂದಗೋಳ : ಅಕ್ಟೋಬರ್ 1 ರಿಂದ ಇಲ್ಲಿಯವರೆಗೆ ಸುರಿದ ಧಾರಾಕಾರ ಮಳೆಯ ರಭಸಕ್ಕೆ ಕುಂದಗೋಳ ತಾಲೂಕಿನಲ್ಲಿ ಒಟ್ಟು 40 ಮನೆಗಳು ಭಾಗಶಃ ಹಾನಿಯಾಗಿವೆ.

ಹೌದು ! ಅಕ್ಟೋಬರ್ ಒಂದರಿಂದ ಎಡೆಬಿಡದೆ ಸುರಿದ ಮಳೆಯ ರಭಸಕ್ಕೆ ಸಂಶಿ ಹೋಬಳಿಯಲ್ಲಿ 19 ಮತ್ತು ಕುಂದಗೋಳ ಹೋಬಳಿಯಲ್ಲಿ 21 ಮನೆಗಳು ಸೇರಿ ಒಟ್ಟು ಕುಂದಗೋಳ ತಾಲೂಕಿನಲ್ಲಿ 40 ಮನೆಗಳು ಭಾಗಶಃ ಹಾನಿಯಾಗಿವೆ ಎಂದು ಕುಂದಗೋಳ ತಾಲೂಕು ಆಡಳಿತ ಮಾಹಿತಿ ನೀಡಿದೆ.

ಈಗಾಗಲೇ ಹಾನಿಯಾದ ಮನೆಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಭಾಗಶಃ ಹಾನಿಯಾದ ಮನೆಗಳು ಸ್ಥಳೀಯ ಅಭಿಯಂತರರು ವೀಕ್ಷಣೆ ಪರಿಶೀಲನೆ ನಡೆಸಿ ಪರಿಪೂರ್ಣ ವರದಿ ನೀಡಬೇಕಿದೆ.

ಒಟ್ಟಾರೆ ಅತಿವೃಷ್ಟಿ ಪರಿಣಾಮ‌ ಮನೆ ಕಳೆದುಕೊಂಡ ಕುಟುಂಬಸ್ಥರು ಪರಿಹಾರಕ್ಕೆ ಅಂಗಲಾಚಿ ಪುನಃ ಮನೆ ನಿರ್ಮಾಣಕ್ಕೆ ಸಹಾಯ ಮಾಡಿ ಎನ್ನುತ್ತಿದ್ದಾರೆ.

Edited By : Suman K
Kshetra Samachara

Kshetra Samachara

18/10/2024 04:18 pm

Cinque Terre

4.57 K

Cinque Terre

0

ಸಂಬಂಧಿತ ಸುದ್ದಿ