ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಿಆರ್‌ಟಿಎಸ್ ಅವ್ಯವಸ್ಥೆ ನಡುವೆ ಡಬಲ್ ಡಕ್ಕರ್ ಬಸ್ ತರಲು ಹೊರಟ ಸರ್ಕಾರ - ಬೆಲ್ಲದ ವಿರೋಧ

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಅಡಿ ನೂರಾರು ಕೋಟಿ ರೂಪಾಯಿ ಅನುದಾನದಲ್ಲಿ ಹುಬ್ಬಳ್ಳಿ ಧಾರವಾಡ ಮಧ್ಯ ಬಿಆರ್‌ಟಿಎಸ್ ಯೋಜನೆ ಮಾಡಲಾಗಿದೆ. ಆದ್ರೆ ಅದು ಜನರ ಅನುಕೂಲಕ್ಕಿಂತ ಅನಾನುಕೂಲಗಳನ್ನೇ ಹೆಚ್ಚಾಗಿದೆ. ಅಪಘಾತಗಳಾಗಿ ಅದೆಷ್ಟೋ ಸಾವುಗಳು ಕೂಡ ಆಗಿವೆ. ಹೀಗಿದ್ದರೂ ಇದಕ್ಕೆ ಸೂಕ್ತ ವ್ಯವಸ್ಥೆನೇ ಇಲ್ಲದಂತಾಗಿದೆ. ಹೀಗಿರುವಾಗ ಈಗಿನ ಸರ್ಕಾರ ಡಬಲ್ ಡಕ್ಕರ್ ಬಸ್ ತರಲು ಯೋಚನೆ ಮಾಡುತ್ತಿದೆಯಂತೆ. ನಮ್ಮ ಜನ ಇನ್ನೂ ಏನೇನು ಅನಭವಿಸಬೇಕೋ ಗೊತ್ತಾಗ್ತಿಲ್ಲ.

ಚಿಗರಿ ಬಸ್‌ಗಳು ಚಲಿಸಲು ಕೆಲವೊಂದು ಕಡೆ ಕಾರಿಡಾರ್‌ಗಳಿವೆ. ಇನ್ನು ಕೆಲವು ಭಾಗಗಳಲ್ಲಿ ಕಾಮನ್ ರೋಡ್.. ಈ ಹಂತಕ್ಕಿದೆ BRTS ಯೋಜನೆ. ಮಳೆಗಾಲದಲ್ಲಿ ಪ್ರತಿಯೊಂದು ಬಸ್ ನಿಲ್ದಾಣದ ಮುಂದೆ ನೀರು ನಿಲ್ಲುತ್ತದೆ. ಚಿಗರಿ ಬಸ್ ಸ್ಟಾಪ್‌ಗಳ ಹತ್ತಿರ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಮುಖ್ಯವಾಗಿ ಅಂದ್ರೆ ರಾಜ್ಯ ಸರ್ಕಾರ ಕೆಟ್ಟು ನಿಂತ ಬಸ್‌ಗಳ ರಿಪೇರಿಗೆ ಹಣ ಸಹ ಕೊಡುತ್ತಿಲ್ಲ. ಇಂತಹ ಸಮಯದಲ್ಲಿ ಸರ್ಕಾರ ಈಗ ಡಬಲ್ ಡಕ್ಕರ್ ಬಸ್ ತರಲು ಯೋಚನೆ ಮಾಡುತ್ತಿದೆ. ಮೊದಲೇ ಸರಿಯಾಗಿ ಪ್ಲಾನ್ ಮಾಡಿಲ್ಲ, ನೀರು ಹೋಗಲು ವ್ಯವಸ್ಥೆ ಇಲ್ಲ, ಈ ಬಿಆರ್‌ಟಿಎಸ್‌ನ್ನು ಸುಧಾರಿಸಬೇಕಾದ್ರೆ ಮತ್ತೇ ಸಾಕಷ್ಟು ಹಣ ಹಾಕಬೇಕಾಗುತ್ತದೆ. ಈ ಯೋಜನೆಗೆ ಅರವಿಂದ ಬೆಲ್ಲದ್ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಾರೆ ಹೇಳುವುದಾದರೆ ಜನರ ಅನುಕೂಲಕ್ಕೆ ಆಗಬೇಕಾದ ಸರ್ಕಾರದ ಯೋಜನೆಗಳು, ಹೀಗೆ ಬೇಕಾಬಿಟ್ಟಿಯಾಗಿ ಆಗ್ತಿದ್ರೆ ಹೇಗೆ ಅಂತ ಜನ ಪ್ರತಿನಿಧಿಗಳೇ ನೀವೇ ಹೇಳಿ. ಯೋಜನೆಗಳ ಮೇಲೆ ಯೋಜನೆ ಕ್ರಿಯೇಟ್ ಮಾಡುತ್ತಿದ್ದೀರಾ. ಮುಂದೇ ಏನಾದ್ರು ಜನರಿಗೆ ತೊಂದ್ರೆಯಾಗೋ ಯೋಜನೇ ತಂದ್ರೆ ಇದಕ್ಕೆ ನೀವೇ ಹೊಣೆಗಾರರಾಗುತ್ತಿರಿ.

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

18/10/2024 05:18 pm

Cinque Terre

19.04 K

Cinque Terre

11

ಸಂಬಂಧಿತ ಸುದ್ದಿ