ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: 'ಶಾಶ್ವತ ಸೂರು ಸಿಗುವವರೆಗೂ ಗಂಜಿ ಕೇಂದ್ರ ತೊರೆಯಲ್ಲ'

ಕುಂದಗೋಳ: ತಮ್ಮ ತಮ್ಮ ಕುಟುಂಬದ ಜೊತೆ ಸುಂದರ ಜೀವನ ಕಳೆಯಬೇಕಿದ್ದ ಹಂಚಿನಾಳ ಗ್ರಾಮದ 25ಕ್ಕೂ ಅಧಿಕ ಕುಟುಂಬಗಳು ಮಳೆ ಅವಾಂತರದಿಂದ ಮಕ್ಕಳು ಮರಿ ಕಟ್ಟಿಕೊಂಡು ಗಂಜಿ ಕೇಂದ್ರದಲ್ಲಿ ಜೀವನ ಕಳೆಯುವ ದುಸ್ಥಿತಿ ಒದಗಿ ಬಂದಿದೆ.

ಬೆಣ್ಣೆ ಹಳ್ಳವು ಹಂಚಿನಾಳ ಗ್ರಾಮದಲ್ಲಿ ಪ್ರವಾಹ ಸೃಷ್ಟಿಸಿ, ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಸೂರು ಕಳೆದುಕೊಂಡ 25ಕ್ಕೂ ಅಧಿಕ ಕುಟುಂಬಗಳು ಇದೀಗ ಶಾಶ್ವತ ಸೂರು ಸಿಗುವವರೆಗೂ ಗಂಜಿ ಕೇಂದ್ರ ತೊರೆಯಲ್ಲ ಎಂಬ ಆಕ್ರೋಶದ ಮಾತುಗಳನ್ನಾಡಿದ್ದಾರೆ.

ಹಂಚಿನಾಳ ಗ್ರಾಮದಲ್ಲಿ ಪ್ರವಾಹಕ್ಕೆ ಸಿಲುಕಿದ 25 ಕುಟುಂಬಗಳ ಪೈಕಿ 63 ಜನ ಪುರುಷರು, 45 ಜನ ಮಹಿಳೆಯರು, 36 ಜನ ಮಕ್ಕಳು ಸೇರಿದಂತೆ 10 ಜನ ಹಿರಿಯ ನಾಗರೀಕರು, ಓರ್ವ ವಿಕಲಚೇತನರಿಗೆ ಆಶ್ರಯ ನೀಡಿ ಊಟ, ವಸತಿ, ವೈದ್ಯಕೀಯ ಸೇವೆ ಔಷಧೋಪಚಾರ, ಸೇರಿದಂತೆ ಶೌಚಾಲಯ ‌ಸ್ನಾನಗೃಹದ ಸೌಕರ್ಯ ನೀಡಲಾಗಿದೆ.

ಆದರೆ, ಮಳೆ ಕಳೆಯುವವರೆಗೂ ಗಂಜಿ ಕೇಂದ್ರ ತೆರೆಯುತ್ತಾರೆ. ಪುನಃ ಅದೇ ಜಾಗ ಅದೇ ಮನೆಗೆ ನಾವು ಹೋಗಬೇಕು ನಮಗೆ ಹಂಚಿನಾಳ ಗ್ರಾಮ ಸ್ಥಳಾಂತರ ಮಾಡಿ ಸ್ವಂತ ಮನೆ ಕಟ್ಟಿಕೊಡಿ ಎನ್ನುತ್ತಾರೆ ನಿರಾಶ್ರಿತರು.

ಪ್ರಸ್ತುತ ಅತಿವೃಷ್ಟಿ ಸಮಸ್ಯೆ ಆಧಾರಿಸಿ ಅನ್ನ, ಆಶ್ರಯ ವ್ಯವಸ್ಥೆ ಕಲ್ಪಿಸಿದ ತಾಲೂಕು ಆಡಳಿತ, ಜಿಲ್ಲಾಡಳಿತ ಶಾಶ್ವತ ಸೂರು ಕಲ್ಪಿಸಿದರಷ್ಟೇ ನಾವು ಗಂಜಿ ಕೇಂದ್ರ ಬಿಟ್ಟು ಹೊರಡಲು ಸಿದ್ಧ ಎನ್ನುವ ನಿರಾಶ್ರಿತರು, ಇಂದು ಗಂಜಿ ಗಂಜಿ ಕೇಂದ್ರಕ್ಕೆ ಭೇಟಿ ನೀಡಲಿರುವ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಸಿದ್ಧರಾಗಿದ್ದಾರೆ.

ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

Edited By : Manjunath H D
Kshetra Samachara

Kshetra Samachara

18/10/2024 04:52 pm

Cinque Terre

9.74 K

Cinque Terre

0

ಸಂಬಂಧಿತ ಸುದ್ದಿ