ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರಡಿ ಪ್ರತ್ಯಕ್ಷ ಆತಂಕದಲ್ಲಿ ಸಾರ್ವಜನಿಕರು

ಹೊಸದುರ್ಗ : ಕುಂಚಿಟಿಗ ಮಠದ ಆವರಣದ ಬಳಿ ಕರಡಿ ಪ್ರತ್ಯೇಕ್ಷಗೊಂಡು ಸ್ಥಳೀಯರು ಆತಂಕಗೊಂಡಿದ್ದಾರೆ. ರಾತ್ರಿ 8 ಗಂಟೆಗೆ ದೃಶ್ಯ ಕಂಡು ಬಂದಿದ್ದು ಹಲವು ದಿನಗಳಿಂದ ಕರಡಿ ಓಡಾಟ ಮಾಡುತ್ತಿದ್ದು ಸ್ಥಳೀಯರ ನಿದ್ದೆಗೆಡಿಸಿದೆ.

ಅರಣ್ಯ ಇಲಾಖೆಯವರು ಬೋನ್ ಇಟ್ಟಾಗ ಜಾಣ ಕರಡಿಗಳು ಬೀಳುತ್ತಿಲ್ಲ. ಇದರಿಂದ ಮಠಕ್ಕೆ ಬರುವ ಭಕ್ತರು, ಸುತ್ತಮುತ್ತಲಿನ ನಿವಾಸಿಗಳು, ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಇಲ್ಲಿಗೆ ವಾಯು ವಿಹಾರಕ್ಕಾಗಿ ಬರುವವರಿಗೂ ಪೀಕಲಾಟವಾಗಿದೆ.

ಇದೀಗ ಮತ್ತರ ಕರಡಿ ಓಡಾಟ ನಡೆಸಿದ್ದು ಕರಡಿಗಳು ಮಠದ ಸುತ್ತಲೂ ಓಡಾಡುವ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಇನ್ನೂ ಮಠಕ್ಕೆ ಹೋಗುವ ಸಿ.ಸಿ.ರಸ್ತೆ ಮೇಲೆ ಕರಡಿ ನಡೆದು ಬಂದಿದೆ. ಏಕಾಏಕಿ ಕರಡಿ ರಸ್ತೆಗೆ ಬಂದಿದ್ದನ್ನು ಕಂಡು ಸ್ಥಳದಲ್ಲಿ ವಾಯುವಿಹಾರ ಮಾಡುತ್ತಿದ್ದವರು ಓಡಿ ಹೋಗಿದ್ದಾರೆ.

ಮಠದ ಆವರಣ ಹಾಗೂ ಸುತ್ತಮುತ್ತಲಿನ ವಾತಾವರಣ ಪ್ರಶಾಂತವಾಗಿರುವುದರಿಂದ ಸಾಕಷ್ಟು ಜನ ಬೆಳಗ್ಗೆ ಮತ್ತು ಸಂಜೆ ಇಲ್ಲಿ ವಾಯು ವಿಹಾರಕ್ಕೆ ಬರುತ್ತಾರೆ. ಅನೇಕ ಸಲ ತಾಯಂದಿರು, ಮಕ್ಕಳನ್ನು ಕರೆತರುತ್ತಾರೆ. ವಯಸ್ಕರು ವಾಕಿಂಗ್ ಮಾಡುತ್ತಿದ್ದು ಕರಡಿ ಸೆರೆಗೆ ಅರಣ್ಯ ಇಲಾಖೆ ಮುಂದಾಗಬೇಕಿದೆ

Edited By : Somashekar
PublicNext

PublicNext

18/10/2024 02:41 pm

Cinque Terre

6.56 K

Cinque Terre

0

ಸಂಬಂಧಿತ ಸುದ್ದಿ