ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ರಸ್ತೆಯಲ್ಲಿ ಗುಂಡಿಗಳದ್ದೇ ಸಾಮ್ರಾಜ್ಯ, ದುರಸ್ತಿಗೆ ಅಧಿಕಾರಿಗಳ ನಿರ್ಲಕ್ಷ್ಯ

ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕಿನ ಸೀಗೆಹಳ್ಳಿ ಗ್ರಾಮವು ಮೇಲ್ನೋಟಕ್ಕೆ ಅಭಿವೃದ್ಧಿಯ ರೀತಿಯಲ್ಲಿ ಕಂಡರೂ ಕೆಲವೊಂದು ರಸ್ತೆಗಳು ತಗ್ಗು ಗುಂಡಿಗಳು ಬಿದ್ದಿರುವುದನ್ನು ಕಾಣಬಹುದು.

ಗ್ರಾಮದ ಮಂಜಣ್ಣ ಅವರ ಮನೆಯಿಂದ ರಂಗಸ್ವಾಮಿ ಅವರ ಮನೆಯವರೆಗೆ 200 ರಿಂದ 250 ಮೀಟರ್ ರಸ್ತೆಗಳಲ್ಲಿ ಕೆಲ ಎಂಟು ಹತ್ತು ವರ್ಷಗಳಿಂದ ಮೊಣಕಾಲು ಉದ್ದದ ಗುಂಡಿಗಳು ಬಿದ್ದಿವೆ. ಇದೇ ರಸ್ತೆಯ ಮೂಲಕ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡುತ್ತಾರೆ. ಆದರೆ ಯಾವ ಅಧಿಕಾರಿಯೂ ರಸ್ತೆ ದುರಸ್ತಿಯ ಬಗ್ಗೆ ಗಮನ ಹರಿಸಿದೆ ಇರುವುದು ವಿಪರ್ಯಾಸ ವಾಗಿದೆ.

ಈ ಗ್ರಾಮದ ರೈತರಿಗೆ ಹೊಲಗಳಿಗೆ ಹೋಗಲು ಮುಖ್ಯ ರಸ್ತೆ ಇದೇ ಆಗಿದೆ. ಹಾಗೂ ವಾಹನ ಸವಾರರಿಗೆ ಬಹಳ ತೊಂದರೆಯಾಗುತ್ತಿದೆ. ಮಳೆ ಬಂದರೆ ಓಡಾಡಲು ಆಗುವುದಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗುಂಡಿಗಳಿಗೆ ತಾತ್ಕಾಲಿಕವಾಗಿ ಜಲ್ಲಿ ಅಥವಾ ಮಣ್ಣನ್ನು ಹಾಕಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.

Edited By : Suman K
Kshetra Samachara

Kshetra Samachara

15/10/2024 07:05 pm

Cinque Terre

4.46 K

Cinque Terre

0

ಸಂಬಂಧಿತ ಸುದ್ದಿ