ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸದುರ್ಗ: ಗತವೈಭವ ಸಾರುವ ಹೊಸದುರ್ಗದ ಕೋಟೆ ಈಗ ಅನೈತಿಕ ಚಟುವಟಿಕೆಯ ತಾಣ.!

ಹೊಸಗುರ್ಗ: ಹೊಸದುರ್ಗದ ಇತಿಹಾಸವನ್ನು ಸಾರುತ್ತಿರುವ ಕೋಟೆ ಅಭಿವೃದ್ಧಿ ವಂಚಿತವಾಗಿದೆ. ನಶಿಸುವ ಹಂಚಿನಲ್ಲಿ ಇದೆ. ಯಾರ ಕಣ್ಣಿಗೂ ಬೀಳದೆ ಸ್ತಬ್ಧವಾಗಿದೆ. ಇತ್ತ ಯಾವ ಅಧಿಕಾರಿಯ ಗಮನವೂ ಇಲ್ಲ, ಕೋಟೆ ಬಗ್ಗೆ ಕಾಳಜಿಯೂ ಇಲ್ಲ ...

ಚಿತ್ರದುರ್ಗದ ಪಾಳೆಯಗಾರ ಚಿಕ್ಕಣ್ಣ ನಾಯಕ ಕ್ರಿಸ್ತಶಕ 1675ರಲ್ಲಿ ಕೋಟೆಯನ್ನು ನಿರ್ಮಿಸಲಾಗಿದೆ ಎನ್ನಲಾಗುತ್ತಿದೆ. ಇಂತಹ ಇತಿಹಾಸ ಸಾರುವ ಕೋಟೆ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ದ್ವಾರ ಬಾಗಿಲಲ್ಲಿ ಎಲ್ಲಿ ನೋಡಿದರೂ ಕುಡಿದು ಬಿಸಾಡಿರುವ ಮದ್ಯದ ಬಾಟಲಿಗಳು, ಸಿಗರೇಟ್‌ನ ತುಂಡುಗಳು ಊಟಕ್ಕೆ ತಂದ ಪ್ಲಾಸ್ಟಿಕ್ ಹಾಳೆಗಳು ಎಲ್ಲಿ ನೋಡಿದರು ಕಸದ ತ್ಯಾಜ್ಯದಿಂದ ಕೂಡಿದೆ. ಇತಿಹಾಸ ಸಾರುವ ಕೋಟೆಗಳು ಅವನತಿ ದಾರಿ ಹಿಡಿದಿವೆ.

ಪ್ರವಾಸಿ ತಾಣವಾಗಿ ಅಭಿವೃದ್ಧಿ ಆಗದಿರುವುದೇ ವಿಪರ್ಯಾಸ. ಅವರತ್ತಿ ಹಂಚಿಕೆ ತಲುಪಿರುವ ಈ ಕೋಟೆಯನ್ನು ಸಂರಕ್ಷಿಸಿ, ರಕ್ಷಣೆ ಮಾಡಿ ಎಂದು ಇಲ್ಲಿನ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Edited By : Suman K
Kshetra Samachara

Kshetra Samachara

18/10/2024 06:27 pm

Cinque Terre

440

Cinque Terre

0

ಸಂಬಂಧಿತ ಸುದ್ದಿ