ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವರ ಮುಂದೆ ಸೊಸೆಯಂದಿರ ಕಣಿತ : ವಿಶಿಷ್ಟ ಆಚರಣೆಗೆ ಗೊಲ್ಲಾಳಮ್ಮ ದೇವಿ ಉತ್ಸವ ಸಾಕ್ಷಿ

ಚಿತ್ರದುರ್ಗ : ಹೀಗೆ ಸೀರೆ ಹುಟ್ಟು ಕೈಯಲ್ಲಿ ಬೇವಿನ ಸೊಪ್ಪು ಹಿಡಿದು, ಹಣೆಗೆ ಭಂಡಾರ ಹಚ್ಚಿ ಉರುಮೆ ಸದ್ದಿಗೆ ಕುಣಿಯುತ್ತಿರುವ ಮಹಿಳೆಯರು. ಇನ್ನೋಂದು ಕಡೆ ಪಲ್ಲಕ್ಕಿಯಲ್ಲಿ ದೇವರು ಹೊತ್ತುಕೊಂಡು ಯುವಕರ ಸಂಭ್ರಮ.

ಈ ದೃಶ್ಯಕ್ಕೆ ಸಾಕ್ಷಿಯಾಗಿದ್ದು ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬಾಲೆನಹಳ್ಳಿ ಗ್ರಾಮ. ಹೌದು ಗ್ರಾಮದಲ್ಲಿ ಶ್ರೀದೇವಿ ಗೊಲ್ಲಳಮ್ಮನ ದೇವಿಗೆ ದಸರಾ ಹಿನ್ನೆಲೆ ಜಾತ್ರಾ ಮಹೋತ್ಸವ ನಡೆಸಲಾಯಿತು. ಅಂಬಿನೋತ್ಸವದೊಂದಿಗೆ ಆರಂಭವಾಗುವ ಜಾತ್ರೆ, ಹರಿಸೇವೇ, ಕುರಿ ಕರೆಯುವ ಉತ್ಸವ, ಆರತಿ, ಪಲ್ಲಕ್ಕಿ ಉತ್ಸವ ಈಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಜಾತ್ರೆಯ ಕೊನೆಯ ದಿನದಂದು ದೇವಿಯ ಭಂಡಾರ ಉತ್ಸವ ನಡೆಯುತ್ತದೆ.

ಇನ್ನೂ ಗ್ರಾಮದ ಗಂಡು ಮಕ್ಕಳನ್ನು ಮದುವೆಯಾಗಿ ಬರುವ ಅವರ ಪತ್ನಿಯರು ಅಂದರೆ ದೇವಿಗೆ ಸೊಸೆಯಾಗಿ ಬಂದವರು. ದೇವಿಯ ಮುಂದೆ ಕುಣಿಯಬೇಕೆಂಬ ಪ್ರತೀತಿ ಇದೆ. ಈ ಪದ್ದತಿ ಕಂಡು ಬಂದಿದ್ದು, ಬುಡಕಟ್ಟು ಕಾಡುಗೊಲ್ಲ ಸಮುದಾಯದಲ್ಲಿ. ಗ್ರಾಮದ ಸೊಸೆಯಂದಿರು ದೇವಿಯ ಭಂಡಾರ ಉತ್ಸವದಲ್ಲಿ ಸಖತ್ ಸ್ಟೆಪ್ಸ್ ಹಾಕಿದರು. ಸೊಸೆಯಂದಿರು, ಕೈಯಲ್ಲಿ ಬೇವಿನ ಸೊಪ್ಪು ಹಿಡಿದು ಕುಣಿದು ಸಂಭ್ರಮಿಸಿದರು.

ಒಟ್ಟಾರೆ ದೇವಿಗೆ ಹರಕೆ ಹೊತ್ತ ಗ್ರಾಮದ ಸೊಸೆಯಂದ್ರು, ತಮ್ಮ ಇಷ್ಟಾರ್ಥ ಈಡೇರಿಕೆಗೆ ದೇವಿಗೆ ನೃತ್ಯ ಸೇವೆ ಮಾಡ್ತಾರೆ. ಹೀಗೆ ನೃತ್ಯ ಮಾಡುವವರ ಬೇಡಿಕೆಗಳನ್ನು ಈಡೇರಿಸಿ ತಾಯಿ ಗೊಲ್ಲಾಳಮ್ಮ ಅನುಗ್ರಹಿಸುತ್ತಾಳೆ ಎನ್ನುವುದು ಭಕ್ತರ ನಂಬಿಕೆ.

Edited By : Somashekar
Kshetra Samachara

Kshetra Samachara

18/10/2024 12:05 pm

Cinque Terre

540

Cinque Terre

0