ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರೈಲು ಸೇವೆಯಲ್ಲಿ ವ್ಯತ್ಯಯ

ಮಂಗಳೂರು: ಪಾಲಕ್ಕಾಡ್ ವಿಭಾಗದ ವಿವಿಧ ಪ್ರದೇಶಗಳಲ್ಲಿ ಹಳಿ ನಿರ್ವಹಣೆ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

ಅ.20ರಂದು ಎರ್ನಾಕುಳಂ ಜಂಕ್ಷನ್‌ನಿಂದ ಹೊರಡುವ 12977 ಸಂಖ್ಯೆಯ ಎರ್ನಾಕುಳಂ ಜಂಕ್ಷನ್ - ಅಜ್ಮೆರ್ ಜಂಕ್ಷನ್ ಮರುಸಾಗರ್ ವೀಕ್ಲಿ ಸೂಪ‌ರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು 50 ನಿಮಿಷ ವ್ಯತ್ಯಯವಾಗಲಿದೆ.

ಎರ್ನಾಕುಳಂ ಜಂಕ್ಷನ್‌ನಿಂದ ಹೊರಡುವ ನಂ. 16338 ಎರ್ನಾಕುಳಂ ಜಂಕ್ಷನ್-ಓಖಾ ಬೈ ವೀಕ್ಲಿ ಎಕ್ಸ್‌ಪ್ರೆಸ್‌ ರೈಲು ನ. 1ರಂದು 1 ಗಂಟೆ ಕಾಲ ವ್ಯತ್ಯಯವಾಗಲಿದೆ.

ನ.6ರಂದು ತಿರುವನಂತಪುರಂ ಸೆಂಟ್ರಲ್‌ನಿಂದ ಹೊರಡುವ 22633 ತಿರುವನಂತಪುರಂ ಸೆಂಟ್ರಲ್-ಹಜ್ರತ್ ನಿಜಾಮುದ್ದೀನ್ ಜಂಕ್ಷನ್ ವೀಕ್ಲಿ ಸೂಪ‌ರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು 30 ನಿಮಿಷಗಳ ಕಾಲ ವ್ಯತ್ಯಯವಾಗಲಿದೆ ಎಂದು ರೈಲ್ವೇ ಇಲಾಖೆ ಪ್ರಕಟನೆ ತಿಳಿಸಿದೆ.

Edited By : PublicNext Desk
Kshetra Samachara

Kshetra Samachara

17/10/2024 07:31 pm

Cinque Terre

498

Cinque Terre

0

ಸಂಬಂಧಿತ ಸುದ್ದಿ