ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆರ್ಥಿಕ ಕೊರತೆಯ ಹೊರತಾಗಿಯೂ 8 ಪೇಟೆಂಟ್ ಪಡೆದ ಮಂಗಳೂರು ವಿವಿ

ಮಂಗಳೂರು: ತೀವ್ರವಾದ ಆರ್ಥಿಕ ಕೊರತೆ, ನಿಗದಿತ ಸಂಖ್ಯೆಯ ಖಾಯಂ ಅಧ್ಯಾಪಕರ ಹೊರತಾಗಿಯೂ ಮಂಗಳೂರು ವಿಶ್ವವಿದ್ಯಾನಿಲಯವು ಕೆಲ ವರ್ಷಗಳಿಂದ ಇಚೆಗೆ 8 ಪೇಟೆಂಟ್‌ಗಳನ್ನು ಪಡೆಯುವ ಮೂಲಕ ಗಮನಾರ್ಹ ಸಾಧನೆಯನ್ನು ದಾಖಲಿಸಿದೆ.

ಮಂಗಳೂರು ವಿವಿಯಲ್ಲಿ 2017ರಲ್ಲಿ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಆರಂಭವಾಗಿತ್ತು. ಬಳಿಕ ಪೇಟೆಂಟ್ ಕಾರ್ಯದಲ್ಲಿ ನಿರಂತರ ಬೆಳವಣಿಗೆ ಕಂಡು ಬಂದಿದೆ. ಈವರೆಗೆ ಒಟ್ಟು 8 ಪೇಟೆಂಟ್ ಕಾರ್ಯಗಳು ನಡೆದಿದ್ದು, ಇವುಗಳಲ್ಲಿ 2 ಪೇಟೆಂಟ್ ಲಿಖಿತ ರೂಪದಲ್ಲಿ ಪ್ರಕಟಗೊಂಡಿವೆ.

ಸಂಶೋಧನೆಗಳಿಗೆ ನೀಡಲಾಗುವ ವಿಶೇಷ ಹಕ್ಕು ಪೇಟೆಂಟ್ ಆಗಿದ್ದು, ಸಂಶೋಧಕರು ತಮ್ಮ ಅವಿಷ್ಕಾರದ ಹಕ್ಕು ಸ್ವಾಮ್ಯವನ್ನು ಪಡೆಯುವುದಾಗಿದೆ.

2018-19ರಿಂದ ಇಲ್ಲಿಯವರೆಗೆ ಒಟ್ಟು8 ಪೇಟೆಂಟ್‌ಗಳು ವಿವಿಯ ವಿವಿಧ ವಿಭಾಗಕ್ಕೆ ಲಭಿಸಿದೆ. ಮೊದಲಿಗೆ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ಕೆ.ಆ‌ರ್. ಚಂದ್ರಶೇಖರ್ ಮತ್ತು ಭಾಗ್ಯ ನೆಕ್ರಕಲಾಯ ಅವರ ಸಂಶೋಧನೆಗೆ ಪೇಟೆಂಟ್ ದೊರಕಿದೆ.

ರಸಾಯನಶಾಸ್ತ್ರ ವಿಭಾಗದಲ್ಲಿ ಬೋಜ ಪೂಜಾರಿ ಹಾಗೂ ಜಗದೀಶ್ ಪ್ರಸಾದ್ ಅವರ ಸಂಶೋಧನೆಗೆ ತಲಾ 2 ಹಾಗೂ ಎಲೆಕ್ಟ್ರಾನಿಕ್ಸ್‌ ವಿಭಾಗದಲ್ಲಿ ಅಂಬರೀಶ್ ಅವರ ಸಂಶೋಧನೆಗೆ ಪೇಟೆಂಟ್ ಲಭಿಸಿದೆ. ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಎ.ಎಂ.ಖಾನ್ ಹಾಗೂ ಇಂಡಸ್ಟ್ರಿಯಲ್ ಕೆಮೆಸ್ಟ್ರಿ ವಿಭಾಗದಲ್ಲಿ ಬಿ.ಕೆ.ಸರೋಜಿನಿ ಅವರ ತಲಾ ಒಂದೊಂದು ಪೇಟೆಂಟ್ ಕಾರ್ಯಗಳು ಲಿಖಿತ ರೂಪದಲ್ಲಿದ್ದು ಅನುಮೋದನೆ ನಿರೀಕ್ಷೆಯಲ್ಲಿದೆ ಎಂದು ಮಂಗಳೂರು ವಿವಿಯ ಪೇಟೆಂಟ್ ವಿಭಾಗದ ಮುಖ್ಯಸ್ಥ ಪ್ರೊ.ಗಣೇಶ್ ಸಂಜೀವ್ ತಿಳಿಸಿದ್ದಾರೆ.

ಎಂಟರಲ್ಲಿ ಏಳು ದೇಶೀಯವಾಗಿ ಪಡೆದ ಪೇಟೆಂಟ್‌ಗಳಾಗಿದ್ದರೆ, ಒಂದು ಅಮೆರಿಕದ ಪೇಟೆಂಟ್ ಆಗಿದೆ. ಇದನ್ನು ಕಿಂಗ್ ಫೈಸಲ್ ಯುನಿವರ್ಸಿಟಿಯ ಸಹಭಾಗಿತ್ವದಲ್ಲಿ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

17/10/2024 05:53 pm

Cinque Terre

526

Cinque Terre

0

ಸಂಬಂಧಿತ ಸುದ್ದಿ