ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಟಿಪ್ಪರ್ ಗಳಲ್ಲಿ ನಿಯಮ ಗಾಳಿಗೆ ತೂರಿ ಕೆಂಪು ಕಲ್ಲುಸಾಗಾಟ

ಮುಲ್ಕಿ: ಟಿಪ್ಪರ್ ಗಳಲ್ಲಿ ನಿಡ್ಡೋಡಿ ಮುಚ್ಚೂರು ನಿಂದ ಟಿಪ್ಪರ್ ಗಳಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಎಗ್ಗಿಲ್ಲದೆ ಕೆಂಪುಗಲ್ಲು ಸಾಕಾಟ ನಡೆಯುತ್ತಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ.

ನಿಡ್ಡೋಡಿ ಮುಚ್ಚೂರು ನಿಂದ ಕಿನ್ನಿಗೋಳಿ - ಮುಲ್ಕಿ ರಾಜ್ಯ ಹೆದ್ದಾರಿ ಮೂಲಕ ಉಡುಪಿ ಜಿಲ್ಲೆಗೆ ನಿಯಮಗಳನ್ನು ಗಾಳಿಗೆ ತೂರಿ ಟರ್ಪಾಲುಗಳನ್ನು ಹಾಕದೆ ಕೆಂಪು ಕಲ್ಲುಸಾಗಟ ಅವ್ಯಾಹತವಾಗಿ ನಡೆಯುತ್ತಿದ್ದು ಅತಿ ವೇಗದಿಂದ ಸಾಗುವ ಟಿಪ್ಪರ್ ಗಳಿಂದ ದ್ವಿಚಕ್ರ ವಾಹನಗಳು ಹಾಗೂ ಪಾದಚಾರಿಗಳು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಅದರಲ್ಲೂ ಬೆಳಗಿನ ಹೊತ್ತು ಅತಿ ವೇಗದಿಂದ ಚಲಿಸುವ ಟಿಪ್ಪರ್ ವಾಹನದಿಂದ ದ್ವಿಚಕ್ರ ವಾಹನಿಗರು ಹಾಗೂ ವಾಕಿಂಗ್ ಹೋಗುವವರು ಭಯಭೀತರಾಗಿದ್ದಾರೆ.

ಈ ಬಗ್ಗೆ ಟ್ರಾಫಿಕ್ ಪೊಲೀಸ್ ಇಲಾಖೆಗೆ ಅನೇಕ ಬಾರಿ ದೂರು ನೀಡಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದು ಕೂಡಲೇ ಅತಿ ವೇಗದಿಂದ ಸಾಗುವ ಟಿಪ್ಪರ್ ಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ

Edited By : PublicNext Desk
Kshetra Samachara

Kshetra Samachara

16/10/2024 10:30 pm

Cinque Terre

786

Cinque Terre

0

ಸಂಬಂಧಿತ ಸುದ್ದಿ