ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ಹಿಂದೂ ಮುಖಂಡನಿಗೆ ಠಾಣೆಯಲ್ಲಿಯೇ ಹಲ್ಲೆಯಾದರೂ ಸ್ಪೀಕರ್ ಖಾದರ್ ಒಂದೆ ಒಂದು ಸ್ವರ ಎತ್ತಿಲ್ಲ - ಸತೀಶ್ ಕುಂಪಲ

ಮಂಗಳೂರು: ತನ್ನದೇ ಕ್ಷೇತ್ರದ ಠಾಣೆಯಲ್ಲಿಯೇ ಹಿಂದೂ ಮುಖಂಡನಿಗೆ ಅನ್ಯಮತೀಯರು ಹಲ್ಲೆ ನಡೆಸಿದರೂ ಸ್ಪೀಕರ್ ಯು.ಟಿ.ಖಾದರ್ ಒಂದೇ ಒಂದು ಧ್ವನಿ ಎತ್ತಿಲ್ಲ. ಸದಾ ಸಾಮರಸ್ಯ ಸಮನ್ವಯ ತರುವ ಕೆಲಸ ಮಾಡುತ್ತೇನೆ ಎನ್ನುವ ಯು.ಟಿ.ಖಾದರ್ ಅವರ ಸಮನ್ವಯತೆ ಅಂದರೆ ಇದೆಯಾ? ಅವರ ಈ ನಡವಳಿಕೆ ಖಂಡಿಸುತ್ತೇನೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆದುಕೊಂಡ ಪರಿಣಾಮ ಇಂದು ಹಿಂದೂ ಮುಖಂಡನ ಮೇಲೆ ಹಲ್ಲೆಯಾಗಿದೆ. ಈ ರೀತಿ ಪರಿಸ್ಥಿತಿಯಾದಲ್ಲಿ ಹಿಂದೂ ಯುವಕರು ಯಾವ ರೀತಿ ಬದುಕೋದು!? ದಕ್ಷಿಣ ಕನ್ನಡ ಸಹಿತ ಕರ್ನಾಟಕದಲ್ಲಿ ಹಿಂದೂಗಳಿಗೆ ರಕ್ಷಣೆಯಿಲ್ಲ ಅನ್ನೋದು ಮತ್ತೆ ಸಾಬೀತಾಗಿದೆ ಎಂದರು.

ಉಳ್ಳಾಲ ಠಾಣಾ ಇನ್ಸ್‌ಪೆಕ್ಟರ್‌ಗೆ ಘಟನೆಯನ್ನು ಶಾಂತವಾಗಿ ನಿಭಾಯಿಸಲು ಹೇಳಿದ್ದೆ. ಆದರೆ, ಮಂಜೇಶ್ವರದ ಎಂಎಲ್ಎಯಿಂದಲೂ ಪೊಲೀಸರಿಗೆ ಒತ್ತಡ ಬಂದಿದೆ. ಇದಾದ ಬಳಿಕ ಬಜರಂಗದಳ ಸಂಚಾಲಕ ಅರ್ಜುನ್ ಮಾಡೂರು ಠಾಣೆಗೆ ಹೋಗಿದ್ದರು. ಈ ವೇಳೆ ಕಿಡಿಗೇಡಿ ಮುಸ್ಲಿಂ ಯುವಕರು ಹಿಂದೂ ಮುಖಂಡನ ಮೇಲೆ ಹಲ್ಲೆ ಮಾಡಿದ್ದಾರೆ‌. ಉಳ್ಳಾಲ ಪೊಲೀಸ್ ಠಾಣೆಯಲ್ಲಿಯೇ ಭದ್ರತೆ ಇಲ್ಲ!

ಸಮಾಜದ್ರೋಹಿ ಪ್ರಕರಣಗಳನ್ನು ರಾಜ್ಯ ಸರಕಾರ ವಾಪಸ್ ಪಡೆದಿರುವುದರಿಂದ ಪ್ರೇರಣೆಗೊಂಡಿದ್ದಕ್ಕೇ ಈ ರೀತಿ ಹಲ್ಲೆ ಮಾಡಲಾಗಿದೆ‌. ಎಲ್ಲಾ ಸಮಯದಲ್ಲಿಯೂ ಮೂಗು ತೂರಿಸುವ ಯು.ಟಿ. ಖಾದರ್ ಈ ಪ್ರಕರಣದ ಬಗ್ಗೆ ಧ್ವನಿ ಎತ್ತಿಲ್ಲ. ಅವರ ಅಧೀನದಲ್ಲಿರುವ ಪೊಲೀಸ್ ಠಾಣೆಯಾದರೂ ಒಂದೇ ಒಂದು ಸ್ವರ ಎತ್ತಿಲ್ಲ ಎಂದು ಸತೀಶ್ ಕುಂಪಲ ಆಕ್ಷೇಪ ವ್ಯಕ್ತಪಡಿಸಿದರು.

Edited By : Shivu K
PublicNext

PublicNext

17/10/2024 09:02 pm

Cinque Terre

32.08 K

Cinque Terre

7

ಸಂಬಂಧಿತ ಸುದ್ದಿ