ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವಾಲ್ಮೀಕಿ ಆದರ್ಶ ಮೈಗೂಡಿಸಿಕೊಂಡಿರುವ ಸಿಎಂ ರಾಜೀನಾಮೆ ನೀಡಲಿ - ಕ್ಯಾ. ಬ್ರಿಜೇಶ್ ಚೌಟ

ಮಂಗಳೂರು: ವಾಲ್ಮೀಕಿ ನಿಗಮ ಹಗರಣದ ಆರೋಪಿ ನಾಗೇಂದ್ರ ಜಾಮೀನು ಪಡೆದು ಬಿಡುಗಡೆಗೊಂಡ ಬಳಿಕ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ವಿಜಯೋತ್ಸವದ ರೀತಿ ಅವರಿಗೆ ಶಾಲು ಹಾಕಿರುವುದು ನೋಡಿದಾಗ ಈ ಹಗರಣದಲ್ಲಿ ಸಿಎಂ ಪ್ರೇರಣೆ ಇದೆಯೆಂದು ಭಾಸವಾಗುತ್ತಿದೆ. ವಾಲ್ಮೀಕಿಯವರ ಆದರ್ಶಗಳನ್ನು ಮೈಗೂಡಿಸಿಕೊಂಡ ಸಿಎಂ ತಮ್ಮ ಮೇಲಿನ ಆರೋಪಗಳ ಪಾರದರ್ಶಕ ತನಿಖೆಗೆ ಪೂರಕವಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಸಂಸದ ಬ್ರಿಜೇಶ್ ಚೌಟ ಒತ್ತಾಯಿಸಿದ್ದಾರೆ.

ದ.ಕ.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಸದ್ಯ ಕರ್ನಾಟಕ ಎಟಿಎಂ ಆಗಿದೆ. ಇದೀಗ ಮಹಾರಾಷ್ಟ್ರ ಚುನಾವಣೆಗೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯರವರು ವಾಲ್ಮೀಕಿ ಹಗರಣದ ಎ1 ಆರೋಪಿ ನಾಗೇಂದ್ರ ಅವರಿಂದ ಸಲಹೆ ಸೂಚನೆ ಪಡೆದಿರುವ ಸಾಧ್ಯತೆಗಳಿವೆ ಎಂದು ಆರೋಪಿಸಿದರು.

ವಾಲ್ಮೀಕಿ ಅವರ ಆದರ್ಶಗಳು, ತಮ್ಮ ಬದುಕಿನಲ್ಲಿ ಮಾಡಿದ ಸಾಧನೆಗಳು ಆದರ್ಶ ಆಗಬೇಕಾಗಿತ್ತು. ಆದರೆ ಕಾಂಗ್ರೆಸ್ ಪಕ್ಷ ಪರಿಶಿಷ್ಟ ಪಂಗಡದ ಅಭ್ಯುದಯಕ್ಕಾಗಿ ಮೀಸಲಿತ್ತ ಹಣವನ್ನು ಚುನಾವಣೆಗೆ ಬಳಸಿಕೊಂಡಿರುವುದರಿಂದ ವಾಲ್ಮೀಕಿ ದಿನಾಚರಣೆಯನ್ನು ಬೇಸರದಿಂದ ಆಚರಿಸಬೇಕಾಗಿ ಬಂದಿದೆ ಎಂದು ಬ್ರಿಜೇಶ್ ಚೌಟ ಹೇಳಿದರು.

Edited By : Manjunath H D
PublicNext

PublicNext

17/10/2024 05:40 pm

Cinque Terre

27.81 K

Cinque Terre

1

ಸಂಬಂಧಿತ ಸುದ್ದಿ