ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ:ಮೆಡಲಿನ್ ಕಾಲೇಜು ವಿದ್ಯಾರ್ಥಿಗಳಿಂದ ಕೈಗಾರಿಕಾ ಪ್ರದೇಶಗಳಿಗೆ ಭೇಟಿ

ಮುಲ್ಕಿ : ಕೈಗಾರಿಕಾ ಚಟುವಟಿಕೆಯಲ್ಲಿ ವಿದ್ಯಾರ್ಥಿ ಗಳಿಗೆ ಪ್ರಾಯೋಗಿಕ ಅನುಭವವನ್ನು ಒದಗಿ ಸುವ ಜತೆಗೆ ವ್ಯಾಪಾರದ ಕಾರ್ಮಿಕರು ಮತ್ತು ಮಾಲೀಕರೊಂದಿಗೆ ಸಂವಾದ ನಡೆಸಲು ಅವಕಾಶ ಒದಗಿಸುವ ಗುರಿ ಯೊಂದಿಗೆ ಮುಲ್ಕಿ ಮೆಡಲಿನ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳ ತಂಡ ಕೈಗಾರಿಕಾ ಭೇಟಿ ನಿಮಿತ್ತ ನಾನಾ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.

ನವ ಮಂಗಳೂರು ಬಂದರು ಪ್ರಾಧಿ ಕಾರ, ಮಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ, ಕ್ಯಾಂಪ್ಲೊ ನಿಯಮಿತ, ಕಲ್ಬಾವಿ ಕನ್ಸೂಮರ್ ಫುಡ್ ಪ್ರೈ.ಲಿ. ಸಹಿತ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ಲೀಡಿಯಾ ಮೆಂಡೋನ್ಸಾ ಮಾತನಾಡಿ ಕೈಗಾರಿಕಾ ಭೇಟಿಯ ಮೂಲಕ ವಿದ್ಯಾರ್ಥಿಗಳು ಹೊಸ ತಂತ್ರ ಜ್ಞಾನಗಳ ಬಗ್ಗೆ ಅರಿವು ಪಡೆಯುತ್ತಾರೆ. ಉದ್ಯಮಕ್ಕೆ ಭೇಟಿ ನೀಡಿದ ನಂತರ ವಿದ್ಯಾರ್ಥಿಗಳು ಸಿದ್ಧಾಂತ ಮತ್ತು ಪ್ರಾಯೋಗಿಕ 2 ಸಂಯೋಜಿತ ಜ್ಞಾನವನ್ನು ಪಡೆಯಬಹುದು. ಇದರಿಂದ ವಿದ್ಯಾರ್ಥಿ ಗಳು ಉದ್ಯೋಗವನ್ನು ಗಳಿಸುವ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ ಎಂದರು.

ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಜೋಯೆಲ್ ಡಿಸೋಜ, ಉಪನ್ಯಾಸಕ ವಿಶಾಂತ್ ಶೆಟ್ಟಿ, ತಾರಾ ಶೆಟ್ಟಿ ಜತೆಗಿದ್ದರು.

Edited By : PublicNext Desk
Kshetra Samachara

Kshetra Samachara

18/10/2024 07:45 am

Cinque Terre

500

Cinque Terre

0

ಸಂಬಂಧಿತ ಸುದ್ದಿ