ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯ ಇಂದಿರಾ ಕ್ಯಾಂಟಿನ್ ನಲ್ಲೊಂದು ಅವ್ಯವಸ್ಥೆ : ಊಟದ ತಾಟು ಗ್ರಾಹಕರೇ ತೊಳೆಯಬೇಕು..!

ಹುಬ್ಬಳ್ಳಿ: ದೇವರು ವರ ಕೊಟ್ಟರೂ ಪೂಜಾರಿ ವರ ಕೊಡುವುದಿಲ್ಲ. ಸರ್ಕಾರ ಬಡವರ ಹಸಿವನ್ನು ನೀಗಿಸಲು ಕಡಿಮೆ ದರದಲ್ಲಿ ಊಟ, ಉಪಹಾರ ಒದಗಿಸಲು ಇಂದಿರಾ ಕ್ಯಾಂಟಿನ್ ನಿರ್ಮಾಣ ಮಾಡಿದೆ. ಆದರೆ ಇಂದಿರಾ ಕ್ಯಾಂಟಿನ್ ಗಳಲ್ಲಿ ಅಂಧ ದರ್ಬಾರ್ ಮಾತ್ರ ಜೋರಾಗಿಯೇ ನಡೆದಿದೆ. ಕ್ಯಾಂಟಿನ್ ಗೆ ಬರುವ ಗ್ರಾಹಕರಿಂದಲೇ ಪ್ಲೇಟ್ ತೊಳೆಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಹುಬ್ಬಳ್ಳಿಯ ಕೆಎಂಸಿ ಆರ್ ಐ ಗೆ ಬರುವ ಬಡರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಊಟ, ಉಪಹಾರ ಒದಗಿಸಲು ಇಂದಿರಾ ಕ್ಯಾಂಟಿನ್ ನಿರ್ಮಾಣ ಮಾಡಲಾಗಿದೆ. ಆದರೆ ಇಲ್ಲಿ ಗ್ರಾಹಕರೇ ತಾವು ಉಂಡಿರುವ ಪ್ಲೇಟ್ ತೊಳೆಯಬೇಕಿದೆ. ಇಲ್ಲವಾದರೆ ಪ್ಲೇಟ್ ತೊಳೆಯುವಂತೆ ಇಲ್ಲಿನ ಸಿಬ್ಬಂದಿಯೇ ಜೋರು ಮಾಡುತ್ತಾರೆ. ಹೌದು... ಇಂತಹದೊಂದು ಪ್ರಕರಣ ಗ್ರಾಹಕರನ್ನು ಮುಜುಗರಕ್ಕಿಡು ಮಾಡಿದೆ.

ದುಡ್ಡು ಕೊಟ್ಟು ತಿಂದರೂ ಕೂಡ ಇಲ್ಲಿ ತಮ್ಮ ಪ್ಲೇಟ್ ತಾವೇ ತೊಳೆಯಬೇಕಾಗಿರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ. ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಮಾಡದೇ ಇಲ್ಲಿನ ಗ್ರಾಹಕರಿಗೆ ಪ್ಲೇಟ್ ತೊಳೆಸುವ ಮೂಲಕ ಅಂಧ ದರ್ಬಾರ್ ನಡೆಸಿದ್ದಾರೆ. ಇಲ್ಲಿನ ಪರಿಸ್ಥಿತಿ ಅನುಭವಿಸಿದ ಸಾರ್ವಜನಿಕರು ಏನಂತಾರೇ ಕೇಳಿ..

ಬೈಟ್: ಸಮೀರ್(ಸಾರ್ವಜನಿಕರು)

ಇನ್ನೂ ಇಂದಿರಾ ಕ್ಯಾಂಟಿನ್ ನಲ್ಲಿ ಹೊಸ ಮೆನ್ಯೂ, ಹೊಸ ಆವಿಷ್ಕಾರದ ಮೂಲಕ ಮಹತ್ವದ ಕಾರ್ಯವನ್ನು ಮಾಡಲು ಸರ್ಕಾರ ಮುಂದಾಗಿದೆ. ಆದರೆ ಇಂತಹ ತಾಟು, ಪ್ಲೇಟ್ ತೊಳೆಸುವ ಕಾರ್ಯವನ್ನು ಮಾಡುವ ಮೂಲಕ ಸರ್ಕಾರದ ಹೆಸರಿಗೆ ಮಸಿ ಬಳೆಯುವ ಕಾರ್ಯವನ್ನು ಇಲ್ಲಿನ ಸಿಬ್ಬಂದಿ ಮಾಡುತ್ತಿರುವುದು ನಿಜಕ್ಕೂ ಚಿಂತಾಜನಕ ಸಂಗತಿಯಾಗಿದೆ. ಆದರೆ ಇಲ್ಲಿನ ಸಿಬ್ಬಂದಿ ಮಾತ್ರ ಪ್ಲೇಟ್ ಕಡಿಮೆ ಇದೆ ಎಂಬುವ ಸಬೂಬು ನೀಡಿತ್ತಾರೆ. ಆದರೆ ರಾಶಿ ರಾಶಿ ಪ್ಲೇಟ್ ಇದ್ದರೂ ಇಂತಹ ಅವ್ಯವಸ್ಥೆ ಇಲ್ಲಿನ ಜನರನ್ನು ಹಾಗೂ ರೋಗಿಗಳನ್ನು ಹೈರಾಣಾಗಿಸಿದೆ.

ಒಟ್ಟಿನಲ್ಲಿ ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಜರುಗಿಸುವ ಕಾರ್ಯವನ್ನು ಮಾಡಬೇಕಿದೆ. ಅಲ್ಲದೇ ತಮಗೆ ತಿಳಿದ ರೀತಿಯಲ್ಲಿ ಕಾನೂನು ಮಾಡುವವವರ ವಿರುದ್ಧ ಶಿಸ್ತು ಕ್ರಮಗಳನ್ನು ಜರುಗಿಸಬೇಕಿದೆ.

ಕ್ಯಾಮೆರಾ ಪರ್ಸನ್ ಗಜಾನನ ಜೊತೆಗೆ ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Suman K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

17/10/2024 04:34 pm

Cinque Terre

40.29 K

Cinque Terre

9

ಸಂಬಂಧಿತ ಸುದ್ದಿ