ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಶಿಥಿಲಗೊಂಡ ಪಾಲಿಕೆಯ ವಾಣಿಜ್ಯ ಕಟ್ಟಡಗಳು : ಅಪಘಾತಕ್ಕೆ ಮುನ್ನವೇ ಎಚ್ಚೇತ್ತುಕೊಳ್ಳಬೇಕಿದೆ ಪಾಲಿಕೆ

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ. ಈ ಪಾಲಿಕೆಯ ಒಡೆತನದ ಬಹುತೇಕ ವಾಣಿಜ್ಯ ಕಟ್ಟಡಗಳು ಹಾಗೂ ಪಾಲಿಕೆಗೆ ಸಂಬಂಧಿಸಿದ ಕಟ್ಟಡಗಳು ಶಿಥಿಲಗೊಂಡಿವೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಸೂಕ್ತ ಕಾರ್ಯಾಚರಣೆ ನಡೆಸಿ ಜನರ ಹಿತ ಕಾಯಬೇಕಿದೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬಹುತೇಕ ಕಟ್ಟಡಗಳು ಶಿಥಿಲಗೊಂಡಿದೆ. ಇದರಲ್ಲಿ ಕೆಲವನ್ನು ತೆರವುಗೊಳಿಸಿದ್ದು, ಇನ್ನೂ ಕೆಲವು ಕಟ್ಟಡಗಳಲ್ಲಿ ವಹಿವಾಟು ನಡೆಯುತ್ತಲೇ ಇವೆ.

ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿರುವ ಪಾಲಿಕೆ ಒಡೆತನದ ವಾಣಿಜ್ಯ ಮಳಿಗೆಗಳಲ್ಲಿ ಕೆಲವು ಕಟ್ಟಡಗಳು ಸಂಪೂರ್ಣ ಶಿಥಿಲಗೊಂಡಿದೆ. ಅಲ್ಲದೇ ಯಾವುದೇ ಸಮಯದಲ್ಲಿ ಆದರೂ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಹೀಗಿದ್ದರೂ ಪಾಲಿಕೆಯ ಇಂಜಿನಿಯರ್ ವಿಭಾಗ ಈ ಬಗ್ಗೆ ಮಾತ್ರ ತಲೆ ಕೆಡಿಸಿಕೊಂಡಿಲ್ಲ.

ಮೊನ್ನೆಯಷ್ಟೇ ಹೊಸೂರಿನ ವಾಣಿಜ್ಯ ಕಟ್ಟಡ ನೆಲಸಮ ಮಾಡಲು ಪಾಲಿಕೆ ನಿರ್ಧಾರ ತೆಗೆದುಕೊಂಡಿದೆ. ಆದರೆ ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಕಟ್ಟಡ ತೆರುವು ಮಾಡಲು ಯಾಕಿಷ್ಟು ನಿರ್ಲಕ್ಷ್ಯ ವಹಿಸುತ್ತಿದೆ ಎಂಬುವುದು ಅರ್ಥವಾಗುತ್ತಿಲ್ಲ. ಆದರೆ ಪಾಲಿಕೆಯ ಇಂಜಿನಿಯರ್ ಅವರು ಪರಿಶೀಲನೆ ನಡೆಸಿ ತೆರವು ಮಾಡ್ತಿವಿ ಅಂತಿದ್ದಾರೆ.

ಇನ್ನೂ ಪಾಲಿಕೆಯ ವ್ಯಾಪ್ತಿಯಲ್ಲಿನ ಬಹುತೇಕ ಕಟ್ಟಡಗಳಲ್ಲಿ ಸಾಮರ್ಥ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಅಲ್ಲದೇ ದಿನಕಳೆದಂತೆ ಮತ್ತಷ್ಟು ಶಿಥಿಲಗೊಂಡಿವೆ. ಹೀಗಿರುವಾಗ ವರುಣನ ಆರ್ಭಟ ಜೋರಾಗಿದ್ದು, ಕಟ್ಟಡಗಳಲ್ಲಿ ಗಿಡಗಳು ಬೇರು ಬಿಟ್ಟಿರುವುದರಿಂದ ಮಳೆಯ ನೀರಿನಿಂದ ಮತ್ತಷ್ಟು ಕಟ್ಟಡಗಳಲ್ಲಿ ಅಭದ್ರತೆ ಉಂಟಾಗಲಿದೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಸೂಕ್ತ ಕ್ರಮಗಳನ್ನು ಜರುಗಿಸುವ ಮೂಲಕ ಮುಂದೆ ಸಂಭವಿಸುವ ಅನಾಹುತಕ್ಕೆ ಬ್ರೇಕ್ ಹಾಕುವ ಕಾರ್ಯ ಮಾಡಬೇಕಿದೆ.

ಒಟ್ಟಿನಲ್ಲಿ ಪಾಲಿಕೆಯ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಸರ್ವೇ ಕಾರ್ಯವನ್ನು ನಡೆಸಿ ಯಾವ ಕಟ್ಟಡಗಳು ವಾಸಕ್ಕೆ, ವಹಿವಾಟುಗಳಿಗೆ ಸೂಕ್ತವಲ್ಲ ಎಂದು ಪರಿಗಣಿಸಿ ಕಾರ್ಯಾಚರಣೆ ನಡೆಸಬೇಕಿದೆ.

ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

17/10/2024 04:29 pm

Cinque Terre

33.04 K

Cinque Terre

0

ಸಂಬಂಧಿತ ಸುದ್ದಿ