ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ : ತೇವಾಂಶ ಕಡಿಮೆಯಾಗಲು ಬಿಡದ ವರುಣ

ಹಾವೇರಿ : ಹಾವೇರಿ ಜಿಲ್ಲೆಯ ರೈತರಿಗೆ ವರುಣನ ಆರ್ಭಟ ಇನ್ನಿಲ್ಲದ ಸಂಕಷ್ಟ ತಂದೊಡ್ಡಿದೆ. ಕಳೆದ ಕೆಲ ದಿನಗಳಿಂದ ಧಾರಾಕಾರವಾಗಿ ಸುರಿದ ಮಳೆಯಿಂದ ಮೆಕ್ಕೆಜೋಳ ಬೆಳೆದ ರೈತ ಸಾಕಷ್ಟು ಆತಂಕಕ್ಕೆ ಒಳಗಾಗಿದ್ದ. ಅಧಿಕ ಹಣ ನೀಡಿ ಜಮೀನಿನಲ್ಲಿದ್ದ ಮೆಕ್ಕೆಜೋಳದ ತೆನೆಗಳನ್ನು ಕಟಾವ್ ಮಾಡಿ ಮನೆಗೆ ತಂದು ಕಾಳು ಹಾಕಿಸಿದ್ದಾನೆ. ಆದರೆ ಮೋಡಮುಸುಕಿದ ವಾತಾವರಣ ಇರುವ ಕಾರಣ ಮೆಕ್ಕೆಜೋಳದಲ್ಲಿನ ತೇವಾಂಶದ ಪ್ರಮಾಣ ಕಡಿಮೆಯಾಗಿಲ್ಲ.

ತೇವಾಂಶ ಅಧಿಕವಿದ್ದ ಕಾರಣ ವರ್ತಕರು ರೈತರ ಮೆಕ್ಕೆಜೋಳ ಖರೀದಿ ಮಾಡಲು ಬರುತ್ತಿಲ್ಲ. ಇತ್ತ ಮೆಕ್ಕೆಜೋಳ ಒಣಗಿಸಲು ಹಾಕಿದರೆ ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಜಿಟಿಜಿಟಿ ಮಳೆಯಾಗುತ್ತಿದೆ. ಮುಂಜಾನೆಯಿಂದಲೇ ಜಿಟಿಜಿಟಿ ಮಳೆಯಾಗುತ್ತಿದ್ದು ಮೆಕ್ಕೆಜೋಳ ಒಣಗಲು ಬಿಡುತ್ತಿಲ್ಲಾ. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಸರ್ವಿಸ್ ರಸ್ತೆಗಳಲ್ಲಿ ಖಾಲಿಜಾಗದಲ್ಲಿ ಮೈದಾನಗಳಲ್ಲಿ ರೈತರು ಮೆಕ್ಕೆಜೋಳ ಒಣಗಲು ಹಾಕಿದ್ದಾರೆ. ಆದರೆ ಜಿಟಿಜಿಟಿ ಮಳೆ ಮೆಕ್ಕೆಜೋಳ ಒಣಗಲು ಬಿಡುತ್ತಿಲ್ಲಾ.

ಇದರಿಂದ ದಿನನಿತ್ಯ ಮೆಕ್ಕೆಜೋಳ ಕಾಳುಗಳಿಗೆ ತಾಡಪಲ್ ಹಾಕುವದು ತಗೆಯುವುದೇ ರೈತರ ಕೆಲಸವಾಗಿದೆ. ತಾಡಪಾಲ್ ಹಾಕಿ ಆಗೆ ಬಿಟ್ಟಿರೆ ಮೆಕ್ಕೆಜೋಳ ಅಲ್ಲಿ ಬೂಸ್ಟ್ ಬಂದು ಕೆಟ್ಟವಾಸನೆ ಬರುತ್ತದೆ. ತಾಡಪಲ್ ತಗೆದು ಒಣಗಲು ಬಿಟ್ಟರೇ ಕೆಲವೇ ಕೆಲವು ನಿಮೀಷಗಳಲ್ಲಿ ಮಳೆ ಬರುತ್ತದೆ.

ಹೀಗಾದರೆ ಹೇಗೆ ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ಅಧಿಕ ತೇವಾಂಶ ಕಾಳುಗಳಲ್ಲಿದ್ದು ಒಣಗಿಸಲು ಮುಂದಾದರೆ ಈ ರೀತಿಯ ಸಮಸ್ಯೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Edited By : Manjunath H D
PublicNext

PublicNext

16/10/2024 09:25 pm

Cinque Terre

35.74 K

Cinque Terre

0

ಸಂಬಂಧಿತ ಸುದ್ದಿ