ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಟ್ರ್ಯಾಕ್ಟರ್

ಹಾವೇರಿ: ಶೇಂಗಾ ಕಾಯಿ ತುಂಬಿದ್ದ ಟ್ರ್ಯಾಕ್ಟರ್ ಕಾಲುವೆಗೆ ಬಿದ್ದು ಶೇಂಗಾ ಕಾಲುವೆಯಲ್ಲಿ ಕೊಚ್ಚಿ ಹೋದ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹತ್ತಿಮತ್ತೂರು ಗ್ರಾಮದಲ್ಲಿ ನಡೆದಿದೆ.

ಲಕ್ಷಾಂತರ ರೂಪಾಯಿ ಮೌಲ್ಯದ ಶೇಂಗಾ ಕಾಲುವೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಹತ್ತಿಮತ್ತೂರು ಗ್ರಾಮದ ನಾಗರಾಜ ನೆಗಳೂರು ಎಂಬ ರೈತರಿಗೆ ಸೇರಿದ ಶೇಂಗಾ ಕಾಲುವೆಯಲ್ಲಿ ಕೊಚ್ಚಿ ಹೋಗಿದೆ. 120 ಚೀಲಗಳಷ್ಟು ಶೇಂಗಾ ಕಾಯಿಗಳು ನೀರಿನಲ್ಲಿ ತೇಲಿ ಹೋಗಿವೆ.

ಕಷ್ಟಪಟ್ಟು ಬೆಳೆದು ಶೇಂಗಾ ಕಾಯಿಗಳನ್ನು ಮಾರಾಟ ಮಾಡಲು ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಸ್ಥಳೀಯರು ಜೆಸಿಬಿ ಮೂಲಕ ಟ್ರ್ಯಾಕ್ಟರ್ ಹೊರ ತೆಗೆದಿದ್ದಾರೆ. ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By : Manjunath H D
PublicNext

PublicNext

15/10/2024 09:30 pm

Cinque Terre

41.82 K

Cinque Terre

1

ಸಂಬಂಧಿತ ಸುದ್ದಿ