ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಗ್ಗಾಂವಿ ಕ್ಷೇತ್ರದಲ್ಲಿ ಭುಗಿಲೆದ್ದ ಬಿಜೆಪಿ ಬಂಡಾಯ, ಬೊಮ್ಮಾಯಿ vs ಶಿಷ್ಯ ದುಂಡಿಗೌಡರ

ಶಿಗ್ಗಾಂವಿ: ಶಿಗ್ಗಾಂವಿ ಕ್ಷೇತ್ರದಲ್ಲಿ ಕಾರ್ಯಕರ್ತರ ಸಹಾಯದಿಂದ ಸತತವಾಗಿ ಗೆಲುವು ಸಾಧಿಸಿದ ಬಸವರಾಜ ಬೊಮ್ಮಾಯಿ, ಈಗ ಮತ್ತೆ ತಮ್ಮ ಮಗ ಭರತ್‌ ಗೆ ಟಿಕೆಟ್ ನೀಡಿದ್ದರಿಂದ ಪಕ್ಷಕ್ಕಾಗಿ ದುಡಿದ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಹುಟ್ಟಿದೆ. ಅಷ್ಟೇ ಅಲ್ದೆ ಬೊಮ್ಮಾಯಿ ಆತ್ಮೀಯ ಶಿಷ್ಯ ಶಿಗ್ಗಾಂವಿ ಸವಣೂರು ಬಿಜೆಪಿಯ ಅಧ್ಯಕ್ಷರಾಗಿದ್ದ ಶ್ರೀಕಾಂತ್ ದುಂಡಿಗೌಡರ ಈ ಬಾರಿ ಉಪ ಚುನಾವಣೆಯಲ್ಲಿ ಟಿಕೆಟ್ ನೀಡುತ್ತಾರೆಂದು, ಫೀಲ್ಡ್‌ಗೆ ಇಳಿದಿದ್ದರು. ಆದ್ರೆ ದುಂಡಿಗೌಡರಗೆ ಬೊಮ್ಮಾಯಿ ಶಾಕ್ ಕೊಟ್ಟಿದ್ದರಿಂದ, ಈಗ ಬಿಜೆಪಿ ಬಂಡಾಯ ಭುಗಿಲೆದ್ದಿದೆ.

ಹೌದು,,, ಶಿಗ್ಗಾಂವಿ ಉಪ ಚುನಾವಣೆಯಲ್ಲಿ ಭರತ್ ಬೊಮ್ಮಾಯಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ, ಶಿಗ್ಗಾಂವಿ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿದೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಶ್ರೀಕಾಂತ್ ದುಂಡಿಗೌಡರ ಈಗ ಬಿಜೆಪಿ ಬಂಡಾಯವಾಗಿ ನಿಲ್ಲಲು ಸಿದ್ಧತೆ ನಡೆಸಿದ್ದಾರೆ. ಈಗ ಟಿಕೆಟ್ ಕೈ ತಪ್ಪಿದ್ದಕ್ಕೆ ಶಿಗ್ಗಾಂವಿಯಲ್ಲಿ ದುಂಡಿಗೌಡರ ಬೆಂಬಲಿಗರ ಸಭೆ ಕೂಡ ಮಾಡಿದ್ದಾರೆ. ಶಿಗ್ಗಾಂವಿ ಕ್ಷೇತ್ರದಿಂದ ಕಾರ್ಯಕರ್ತರ ಸಹಾಯದಿಂದ ಬಸವರಾಜ ಬೊಮ್ಮಾಯಿ ಸತತವಾಗಿ ಗೆಲವು ಸಾಧಿಸುತ್ತಾ ಬಂದಿದ್ದರು, ಈ ಉಪಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರಕ್ಕೆ ಕಾರ್ಯಕರ್ತರಿಗೆ ಟಿಕೆಟ್ ಸಿಗುತ್ತೆ ಎಂದು ನಂಬಿದ್ದರು. ಆದ್ರೆ ಸಂಸದ ಬೊಮ್ಮಾಯಿ ದೆಹಲಿ ಹೈಕಮಾಂಡ್‌ ಗೆ ಭೇಟಿಯಾಗಿ ತಮ್ಮ ಮಗ ಭರತ್‌ ಗೆ ಟಿಕೆಟ್ ಧಕ್ಕಿಸಿಕೊಂಡು ಬಂದಿದ್ದಾರೆ. ಇದು‌ ಕೂಡ ಕುಟುಂಬ ರಾಜಕಾರಣವಾಯಿತು ಎಂದು ಮನನೊಂದ ಕಾರ್ಯಕರ್ತರು ಬಂಡಾಯದ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಬಿಜೆಪಿಯ ಶಿಗ್ಗಾಂವಿ ಸವಣೂರು ಅಧ್ಯಕ್ಷರಾಗಿದ್ದ ಶ್ರೀಕಾಂತ್ ದುಂಡಿಗೌಡರ ಬೊಮ್ಮಾಯಿ ಅವರು ನನಗೆ ಅನ್ಯಾಯ ಮಾಡಿದ್ದಾರೆ. ಕಾರ್ಯಕರ್ತರನ್ನು ದೂರ ಮಾಡಿ ತಮ್ಮ ಮಗನಿಗೆ ಟಿಕೆಟ್ ಕೊಡಿಸಿದ್ದಾರೆ. ಅದಕ್ಕಾಗಿ ಬಿಜೆಪಿ ಬಂಡಾಯವಾಗಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ. ಈ ಶಿಗ್ಗಾಂವಿ ಕ್ಷೇತ್ರದ ಬಂಡಾಯದ ಜಿದ್ದಾಜಿದ್ದಿಯಲ್ಲಿ ಯಾರು ಗದ್ದುಗೆ ಏರುತ್ತಾರೆ? ಮತದಾರರು ಯಾರ ಕೈ ಹಿಡಿಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.

Edited By : Somashekar
PublicNext

PublicNext

22/10/2024 04:39 pm

Cinque Terre

17.34 K

Cinque Terre

1

ಸಂಬಂಧಿತ ಸುದ್ದಿ