ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಖತರ್ನಾಕ್ ಕಳ್ಳ ಅರೆಸ್ಟ್ - 8 ಬೈಕ್ ವಶ

ಬೆಳಗಾವಿ: ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬೆಳಗಾವಿ ಪೊಲೀಸರು ಬಂಧಿಸಿ ಆತನಿಂದ 8 ಬೈಕ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಹೇಮಂತ ಶಿವಾಜಿ ಜಾಂಗಳೆ ಬಂಧಿತ ಆರೋಪಿಯಾಗಿದ್ದಾನೆ. ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳತನದ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ಆರೋಪಿ ಹೇಮಂತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಎಂಟು ಬೈಕ್‌ಗಳನ್ನು ತಾನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ಎಪಿಎಂಸಿ ಪೊಲೀಸ್ ಠಾಣೆ ಮತ್ತು ಸಂಕೇಶ್ವರ ಪೊಲೀಸ್ ಠಾಣೆ ಅಪರಾಧ ಪ್ರಕರಣಗಳಲ್ಲಿ ತಲಾ ಒಂದೊಂದು ಬೈಕ್‌ಗಳು ಪತ್ತೆ ಆಗಿದ್ದು, ಉಳಿದ 6 ಬೈಕ್‌ಗಳ ವಾಹನ ಮಾಲೀಕರ ಪತ್ತೆ ಕಾರ್ಯ ಮುಂದುವರೆದಿದೆ.

ಪ್ರಕರಣದಲ್ಲಿ ವಿಶೇಷ ಕರ್ತವ್ಯಪ್ರಜ್ಞೆ ತೋರಿದ ಪೊಲೀಸ್ ಇನ್ಸ್‌ಪೆಕ್ಟರ್ ಆರ್ ಆರ್ ಪಾಟೀಲ ಪಿಎಸ್‌ಐಗಳಾದ ಮಂಜುನಾಥ ಭಜಂತ್ರಿ, ತ್ರಿವೇಣಿ ನಾಟಿಕಾರ್, ಬಿ ಕೆ ಮಿಟಗಾರ, ಎಎಸ್‌ಐ ಹಾಗೂ ಸಿಬ್ಬಂದಿ ಬಿ ಎಂ ನರಗುಂದ, ಎಫ್ ಬಿ ಮುಜಾವರ, ಖಾದರ ಖಾನಮ್ಮನವರ, ಗೋವಿಂದ ಪೂಜಾರಿ, ಮತ್ತು ಎನ್ ಡಿ ಬಿರಗೊಂಡ ಅವರನ್ನು ಹಿರಿಯ ಅಧಿಕಾರಿಗಳು ಪ್ರಶಂಸಿದ್ದಾರೆ.

Edited By : Vijay Kumar
Kshetra Samachara

Kshetra Samachara

16/10/2024 05:40 pm

Cinque Terre

4.36 K

Cinque Terre

0

ಸಂಬಂಧಿತ ಸುದ್ದಿ