ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಭೆಯಲ್ಲೇ ಮಹಿಳಾ ರಾಜಕಾರಣಿಯಿಂದ ಅವಮಾನ - ಮನನೊಂದು ಪ್ರಾಣಬಿಟ್ಟ IAS ಅಧಿಕಾರಿ.!

ಕೇರಳ : ಮಾತು ಆಡಿದರೆ, ಹೋತು ಮುತ್ತು ಒಡೆದರೆ ಹೊತ್ತು ಎಂಬ ಮಾತಿಗೆ ಇಲ್ಲಿ ನಡೆದರುವ ಘಟನೆ ಸಾಕ್ಷಿಯಾಗಿದೆ. ಕೇರಳದ ಐಎಎಸ್ ಅಧಿಕಾರಿಯ ಪ್ರಾಮಾಣಿಕತೆಯ ಬಗ್ಗೆ ನಾಯಕರೊಬ್ಬರು ಪ್ರಶ್ನೆಗಳನ್ನು ಎತ್ತಿದಾಗ, ನಾಯಕರಿಂದ ಕುಹಕದ ಮರುದಿನವೇ ಆತನ ಶವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ನಡೆದಿದೆ.

ಕಣ್ಣೂರಿನಲ್ಲಿ ಕರ್ತವ್ಯದಲ್ಲಿದ್ದಾಗ ನವೀನ್ ಬಾಬು ಅವರನ್ನು ಅಲ್ಲಿನ ಸರ್ಕಾರವು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಎಡಿಎಂ) ಆಗಿ ನಿಯೋಜಿಸಿತ್ತು. ಹೀಗಾಗಿ ಸೋಮವಾರ ಕಣ್ಣೂರಿನಿಂದ ವರ್ಗಾವಣೆಯಾದಾಗ ಅವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ಸಿಪಿಐ ಮುಖಂಡೆ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಪಿ.ದಿವ್ಯಾ ಅವರನ್ನು ಆಹ್ವಾನಿಸಿರಲಿಲ್ಲ. ಇದರ ಹೊರತಾಗಿಯೂ ಅವರು ಸಮಾರಂಭಕ್ಕೆ ಆಗಮಿಸಿ, ಬಂದ ತಕ್ಷಣ ಎಡಿಎಂ ವಿರುದ್ಧ ನಾನಾ ಆರೋಪಗಳ ಸುರಿಮಳೆ ಗೈದಿದ್ದಾರೆ.

ಕಣ್ಣೂರು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಎಡಿಎಂ) ನವೀನ್ ಬಾಬು ಅವರು ಮಂಗಳವಾರ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಚೆಂಗನ್ನೂರ್ ರೈಲ್ವೆ ನಿಲ್ದಾಣದಲ್ಲಿ ಬಾಬು ಅವರ ಪತ್ನಿ ಅವರಿಗಾಗಿ ಕಾಯುತ್ತಿರುವ ಮಧ್ಯೆಯೇ ಅವರು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.

ಪಿ.ಪಿ.ದಿವ್ಯಾ ಅವರು, ಈಗ ಬೇರೆ ಜಿಲ್ಲೆಗೆ ಹೋಗುತ್ತಿರುವ ಎಡಿಎಂ ಅವರಿಗೆ ಶುಭ ಹಾರೈಸುತ್ತೇನೆ. ಒಮ್ಮೆ ನಾನು ಚೆಂಗ್ಲೈನಲ್ಲಿ ಪೆಟ್ರೋಲ್ ಪಂಪ್‌ಗೆ ಎನ್‌ಒಸಿ ನೀಡಲು ಅವರನ್ನು ಕರೆದಿದ್ದೆ. ಆದರೆ ಅವರು ಹೇಳಿದ್ದು, - ರಸ್ತೆ ವಕ್ರವಾಗಿದೆ, ಆದ್ದರಿಂದ ಎನ್ಒಸಿ ನೀಡಲು ಸಾಧ್ಯವಿಲ್ಲ. ಆದರೆ ನಂತರ ಎರಡು ದಿನಗಳ ಅವಧಿಯಲ್ಲಿ ಅವರಿಗೆ ಎನ್‌ಒಸಿ ನೀಡಲಾಗಿದೆ.

ಇದಾದ ನಂತರ ವೇದಿಕೆಯಲ್ಲೇ ಎಡಿಎಂ ಅವರನ್ನು ತರಾಟೆಗೆ ತೆಗೆದುಕೊಂಡ ದಿವ್ಯಾ ಅವರು, ಎನ್‌ಒಸಿ ನೀಡಿದ್ದಕ್ಕಾಗಿ ಅವರಿಗೆ ಧನ್ಯವಾದ ಹೇಳಲು ಬಂದಿದ್ದೇನೆ ಎಂದು ಹೇಳಿದರು. ಜೀವನದಲ್ಲಿ ನಾವು ಪ್ರಾಮಾಣಿಕರಾಗಿರಬೇಕು. ಕಣ್ಣೂರಿನಲ್ಲಿ ಮಾಡಿದ್ದನ್ನು ಬೇರೆ ಕಡೆ ಮಾಡಬಾರದು. ಅವರು ಜನರಿಗೆ ಉತ್ತಮ ರೀತಿಯಲ್ಲಿ ಸಹಾಯ ಮಾಡಬೇಕು. ಇದು ಸರ್ಕಾರಿ ಸೌಲಭ್ಯ, ಏನಾದ್ರೂ ಆಗಲು ಒಂದು ಕ್ಷಣ ಸಾಕು ಎಂದರು.

ಹೀಗೆ ಪಿ.ಪಿ.ದಿವ್ಯಾ ಅವರು ಹೇಳಿ ಹೊರಟು ಹೋದ ಮರುದಿನವೇ ನವೀನ್ ಬಾಬು ಅವರ ಅಧಿಕೃತ ನಿವಾಸದಲ್ಲಿ ಶವ ಪತ್ತೆಯಾಗಿದೆ. ಏತನ್ಮಧ್ಯೆ, ಕಾಂಗ್ರೆಸ್ ಮೃತರ ಮನೆಯ ಬಳಿ ಪ್ರತಿಭಟನೆ ನಡೆಸುತ್ತಿದೆ. “ನಮಗೆ ಪೊಲೀಸರ ಮೇಲೆ ನಂಬಿಕೆ ಇಲ್ಲ. ಪ್ರಾಮಾಣಿಕ ಅಧಿಕಾರಿಗಳಿಂದ ವಿಚಾರಣೆ ನಡೆಸಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಕಣ್ಣೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಾರ್ಟಿನ್ ಜಾರ್ಜ್ ಹೇಳಿದ್ದಾರೆ. ಮತ್ತೊಂದೆಡೆ ಪೊಲೀಸರು ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದಾರೆ.

Edited By : Abhishek Kamoji
PublicNext

PublicNext

15/10/2024 10:37 pm

Cinque Terre

125.42 K

Cinque Terre

2

ಸಂಬಂಧಿತ ಸುದ್ದಿ