ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಮಾರ್ಟಿನ್' ಬಗ್ಗೆ ಕೆಟ್ಟದಾಗಿ ರಿವ್ಯೂವ್: ಯೂಟ್ಯೂಬರ್ ಸ್ಟ್ರಾಂಗ್ ಸುಧಾಕರ್‌ನನ್ನು ಬಂಧಿಸಿ ಬಿಸಿ ಮುಟ್ಟಿಸಿದ ಖಾಕಿ

ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್‌' ಸಿನಿಮಾ ಕುರಿತು ನೆಗೆಟಿವ್ ವಿಮರ್ಶೆ ಮಾಡುವ ಮೂಲಕ ಭಾರೀ ಸದ್ದು ಮಾಡಿದವರು ಕನ್ನಡದ ಯೂಟ್ಯೂಬರ್ ಸ್ಟ್ರಾಂಗ್ ಸುಧಾಕರ್ ಅವರನ್ನು ಪೊಲೀಸರು ಬಂಧಿಸಿ ಬಿಸಿ ಮುಟ್ಟಿಸಿದ್ದಾರೆ.

ಹೌದು. 'ಮಾರ್ಟಿನ್‌' ಬಗ್ಗೆ ನೆಗೆಟಿವ್ ವಿಮರ್ಶೆ ಮಾಡಿದ್ದ ಸ್ಟ್ರಾಂಗ್ ಸುಧಾಕರ್ ಅಲಿಯಾಸ್ ಸುಧಾಕರ ಗೌಡ ವಿರುದ್ಧ ಧ್ರುವ ಸರ್ಜಾ ಫ್ಯಾನ್ಸ್ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದರು. ಮಾದನಾಯಕನಹಳ್ಳಿ ಪೊಲೀಸ್​​ ಠಾಣೆಗೆ ದೂರು ನೀಡಿ ತಾನು ಮಾಡಿದ್ದ ವಿಡಿಯೋ ಡಿಲೀಟ್​ ಮಾಡಿಸಿದ್ದರು. ಆದರೀಗ, ಮಾದನಾಯಕನಹಳ್ಳಿ ಪೊಲೀಸರು ಹಲ್ಲೆ ಕೇಸ್​ವೊಂದರಲ್ಲಿ ರೀಲ್ಸ್​​ ಸ್ಟಾರ್​​​ ಸುಧಾಕರ್​ ಅರೆಸ್ಟ್​ ಮಾಡಿದ್ದಾರೆ.

ಸ್ಟ್ರಾಂಗ್ ಸುಧಾಕರ ಮಾಡಿದ ವಿಡಿಯೋದಲ್ಲಿ 'ನಾನು ಜೀವನದಲ್ಲಿ ನೋಡಿದ ಅತ್ಯಂತ ಕೆಟ್ಟ ಸಿನಿಮಾ ಮಾರ್ಟಿನ್ ಎಂದೆಲ್ಲಾ ಹೇಳಿಕೊಂಡಿದ್ದರು. ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಎಲ್ಲರೂ ಕೆಜಿಎಫ್ ಸಿನಿಮಾ ಕಾಪಿ ಮಾಡುತ್ತಿದ್ದಾರೆ. ಕೆಜಿಎಫ್ ಸಿನಿಮಾ ಮಾದರಿಯಲ್ಲಿಯೇ ಕಳಪೆಯಾಗಿ ಉಪೇಂದ್ರ ಅವರ 'ಕಬ್ಜ' ಸಿನಿಮಾ ಮಾಡಲಾಗಿದೆ. ಕಬ್ಜ ಸಿನಿಮಾದ ಮುಂದುವರಿದ ಕಳಪೆ ಭಾಗ ಎನ್ನುವಂ ರೀತಿಯಲ್ಲಿ ಮಾರ್ಟಿನ್ ಸಿನಿಮಾ ಮಾಡಲಾಗಿದೆ' ಎಂದೆಲ್ಲಾ ಹೇಳಿಕೆ ನೀಡಿದ ವಿಡಿಯೋವನ್ನು ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದನು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ವೀಕ್ಷಣೆಗಳು, ಲೈಕ್ಸ್ ಹಾಗೂ ಕಾಮೆಂಟ್‌ಗಳು ಬಂದಿದ್ದವು. ಇದರಿಂದ ಸ್ಟ್ರಾಂಗ್ ಸುಧಾಕರ ಬೇರೊಂದು ಸಿನಿಮಾದ ಬಗ್ಗೆ ಕೆಟ್ಟದಾಗಿ ಮಾತನಾಡಿ ವಿಡಿಯೋ ಮಾಡಿದರೆ ಫೇಮಸ್ ಆಗಬಹುದು ಎಂದು ನಿರೀಕ್ಷೆ ಮಾಡಿದ್ದನು. ಆದರೆ, ಈ ಹಿನ್ನೆಲೆಯಲ್ಲಿ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿ ಪೊಲೀಸರಿಂದ ವಾರ್ನಿಂಗ್ ಪಡೆಯುತ್ತೇನೆ ಎಂದು ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದ್ದಾನೆ.

ಇದರ ಬೆನ್ನಲ್ಲಿಯೇ ಪೊಲೀಸರಿಗೆ ಈ ಬಗ್ಗೆ ಮಾರ್ಟಿನ್ ಚಿತ್ರದ ನಾಯಕ ಧ್ರುವ ಸರ್ಜಾ ಅವರ ಅಭಿಮಾನಿಗಳು ದೂರು ನೀಡಿದ್ದರು. ಈ ಹಿಂದೆ ಯೂಟೂಬರ್ ಸುಧಾಕರನ ವಿರುದ್ಧ ಹಲ್ಲೆಗೆ ಸಂಬಂಧಪಟ್ಟಂತೆ ಒಂದು ಕೇಸಿನಲ್ಲಿ ವಾರೆಂಟ್ ಇಶ್ಯೂ ಆಗಿದ್ದರೂ ಪೊಲೀಸ್ ಠಾಣೆಗೆ ಹಾಜರಾಗದೇ ತಲೆ ಮರೆಸಿಕೊಂಡು ಓಡಾಡುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

ಏನಿದು ಪ್ರಕರಣ?:

ಹಲ್ಲೆ ಪ್ರಕರಣ ಒಂದರಲ್ಲಿ ಸುಧಾಕರ್ ಭಾಗಿಯಾಗಿದ್ದರು ಎನ್ನುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಪೊಲೀಸ್ರು ಸುಧಾಕರ್ ವಿರುದ್ಧ ವಾರೆಂಟ್ ಸಹ ಜಾರಿ ಮಾಡಿದ್ರು. ಮಾರ್ಟಿನ್ ಸಿನಿಮಾದ ನೆಗೆಟಿವ್ ವಿಮರ್ಶೆ ಸಂಬಂಧ ಧ್ರುವ ಫ್ಯಾನ್ಸ್​​ ದೂರು ನೀಡಿದ ಕಾರಣಕ್ಕೆ ಠಾಣೆಗೆ ಕರೆಸಿದ್ದ ಪೊಲೀಸರು ಕ್ಷಮೆ ಕೇಳಿಸಿ ವಿಡಿಯೋ ಡಿಲೀಟ್​ ಮಾಡಿಸಿದ್ದರು. ಈಗ ಹಲ್ಲೆ ಕೇಸಲ್ಲಿ ಸುಧಾಕರ್​ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿಂದೆ ಸುಧಾಕರ್​ ಖಾಸಗಿ ಚಾನೆಲ್​​ ಒಂದಕ್ಕೆ ಸಂದರ್ಶನ ನೀಡಿದ್ರು. ಈ ಸಂದರ್ಶನದಲ್ಲಿ ತನ್ನ ಯೂಟ್ಯೂಬ್​ ರೆವೆನ್ಯೂ ಬಗ್ಗೆ ಮಾತಾಡಿದ್ದಾರೆ. ನಾನು ಡಿಗ್ರಿ ಮಾಡಿದ್ದೇನೆ. ಇಂದು ಕೆಲಸಕ್ಕೆ ಹೋಗಿದ್ರೆ 50 ಸಾವಿರ ಸಿಗುತ್ತಿತ್ತು. ಅದಕ್ಕಿಂತಲೂ ಹೆಚ್ಚು ಎಂದರೆ ಲಕ್ಷ ಲಕ್ಷ ದುಡಿಯುತ್ತೇನೆ ಎಂದಿದ್ದರು ಸುಧಾಕರ್.

Edited By : Vijay Kumar
PublicNext

PublicNext

15/10/2024 09:39 pm

Cinque Terre

36.34 K

Cinque Terre

3

ಸಂಬಂಧಿತ ಸುದ್ದಿ