ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಜ್ವಲ್ ರೇವಣ್ಣಗೆ ಸೀರೆಯಲ್ಲೇ ಸಂಕಟ - ತಾನೇ ತೋಡಿಕೊಂಡ ಹಳ್ಳದಲ್ಲಿ ಪ್ರಜ್ವಲ್ ಒದ್ದಾಟ

ಬೆಂಗಳೂರು: ಅತ್ಯಾಚಾರ ಕೇಸ್‌ನಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಮಹಾ ಸಂಕಷ್ಟ ಎದುರಾಗಿದೆ. ಸಂತ್ರಸ್ತೆ ಸೀರೆಯಲ್ಲಿ ಸಿಕ್ಕ ವೀರ್ಯ ಪ್ರಜ್ವಲ್ ಅವರದ್ದೇ ಎಂದು DNA ಪರೀಕ್ಷೆಯಲ್ಲಿ ಸಾಬೀತಾಗಿದೆ. ಈ ಹಿನ್ನೆಲೆ ಮಾಜಿ ಸಂಸದ ಪ್ರಜ್ವಲ್ ಗಂಡಾಂತರ ಎದುರಗಿದೆ.

ವೀರ್ಯ ಪ್ರಜ್ವಲ್‌ದ್ದೇ ಎಂದು ಕನ್ಫರ್ಮ್ ಆಗುತ್ತಿದ್ದಂತೆ ಎಸ್‌ಐಟಿ ಅಧಿಕಾರಿಗಳು ಶೀಘ್ರವೇ ಹೆಚ್ಚುವರಿ ಚಾರ್ಜ್‌ಶೀಟ್‌ ಸಲ್ಲಿಕೆಗೆ ತಯಾರಿ ನಡೆಸಿದ್ದಾರೆ. 2 ದಿನದ ಹಿಂದೆ DNA ಟೆಸ್ಟ್‌ ರಿಪೋರ್ಟ್ ಎಸ್‌ಐಟಿಗೆ ಸಿಕ್ಕಿದೆ.

ಹಾಸನದ ಸಂಸದರ ಅತಿಥಿ ಗೃಹ, ಹೊಳೆನರಸೀಪುರ, ಬೆಂಗಳೂರಿನ ಬಸವನಗುಡಿ, ತೋಟದ ಮನೆಯ ಬೆಡ್‌ಶೀಟ್‌ ಕೆಲಬಟ್ಟೆಗಳು, ಸಂತ್ರಸ್ತೆಯಿಂದ ಸೀರೆಗಳನ್ನು ಎಸ್‌ಐಟಿ ವಶಕ್ಕೆ ಪಡೆದುಕೊಂಡಿತ್ತು. ಇವೆಲ್ಲವನ್ನು ಜಪ್ತಿ ಮಾಡಿ ಕೋರ್ಟ್‌ಗೆ ಅನುಮತಿ ಪಡೆದು ಡಿಎನ್‌ಎ ಪರೀಕ್ಷೆಗೆ ಸಲ್ಲಿಸಿಲಾಗಿತ್ತು.

ಕೆಲಸದಾಕೆ ಮೇಲೆ ತೋರಿದ ದೌರ್ಜನ್ಯ ಪ್ರಜ್ವಲ್‌ಗೆ ಮುಳುವಾದಂತೆ ಕಾಣುತ್ತಿದೆ. ಅತ್ಯಾಚಾರ ನಡೆದ ದಿನ ಮನೆ ಕೆಲಸದಾಕೆ ಧರಿಸಿದ್ದ ಬಟ್ಟೆ ಪ್ರಜ್ವಲ್ ಮನೆಯಲ್ಲೆ ಇತ್ತಂತೆ. ಮನೆ ಕೆಲಸದಾಕೆ ಮಗಳ ಮದುವೆ ನಿಮಿತ್ತ ಬಟ್ಟೆ ಸ್ವಚ್ಛ ಮಾಡದೆ ಮದುವೆಗೆ ರಜೆ ಹಾಕಿ ಹೋಗಿದ್ದಳಂತೆ. ಕೆಲ ತಿಂಗಳ ಬಳಿಕ ಆ ಮನೆ ಕೆಲಸದಾಕೆ ಬಟ್ಟೆ ಕೇಳಲು ಬಂದಾಗ ಪ್ರಜ್ವಲ್ ಮನೆಯವರು ಯಾವ ಬಟ್ಟೆ ಇಲ್ಲ ಹೋಗು ಎಂದು ಹೇಳಿ ಕಳುಹಿಸಿದ್ರಂತೆ. ಈ ಮಧ್ಯೆ ಹೊಸ ಕೆಲಸದವರು ಬಂದಿದ್ದು ಹಳೆ ಕೆಲಸದಾಕೆ ಬಟ್ಟೆಗಳು ಹಾಗೂ ಕೆಲ ವಸ್ತುಗಳನ್ನು ಮೂಟೆ ಕಟ್ಟಿ ಮೇಲೆ ಹಾಕಿದ್ರಂತೆ. ಸದ್ಯ ಇದೇ ಮೂಟೆಯಲ್ಲಿದ್ದ ಸೀರೆ ಪ್ರಜ್ವಲ್‌ಗೆ ಉರುಳಾಗಿದೆ. ಆ ದಿನ ಸಂತ್ರಸ್ತೆಗೆ ಬಟ್ಟೆ ಕೊಟ್ಟು ಕಳುಹಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲವೇನೋ ಅನ್ನೋದು ಕೆಲವರ ಮಾತಾಗಿದೆ.

Edited By : Vijay Kumar
PublicNext

PublicNext

16/10/2024 12:03 pm

Cinque Terre

75.76 K

Cinque Terre

15

ಸಂಬಂಧಿತ ಸುದ್ದಿ