ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಗ್ ಬಾಸ್ ಮನೆಯಿಂದ ರಂಜಿತ್, ಜಗದೀಶ್ ಔಟ್?

ಬಿಗ್ ಬಾಸ್ ಮನೆಯಿಂದ ಲಾಯರ್ ಜಗದೀಶ್ ಹಾಗೂ ರಂಜಿತ್ ಹೊರ ಬಿದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮನೆಯಲ್ಲಿ ಹೊಡೆದಾಡಿಕೊಂಡ ಹಿನ್ನೆಲೆಯಲ್ಲಿ ಇಬ್ಬರೂ ಔಟ್ ಆಗಿದ್ದಾರೆ ಎನ್ನಲಾಗುತ್ತಿದೆ.ನಿನ್ನೆ ಎಪಿಸೋಡ್ ನಲ್ಲೂ ಕೂಡ ದೊಡ್ಡ ಜಗಳವಾಗಿತ್ತು. ರಂಜಿತ್ ಮತ್ತು ಜಗದೀಶ್ ನಡುವೆ ನೇರಾನೇರ ಜಗಳ ಆಗಿತ್ತು. ಅದಲ್ಲದೇ ಜಗದೀಶ್ ಮತ್ತು ಉಗ್ರಂ ಮಂಜು ನಡುವೆ ಜಗಳವಾಗಿತ್ತು. ಕೆಲವು ವರದಿಯ ಮಾಹಿತಿ ಪ್ರಕಾರ ಮತ್ತೊಬ್ಬ ಸ್ಪರ್ಧಿ ಮಾನಸಾ ಅವರ ವಿಚಾರಕ್ಕೆ ಜಗಳ ಆಗಿದೆ ಎನ್ನಲಾಗಿದೆ. ಈ ಮೂಲಕ ಕನ್ನಡ ಬಿಗ್ ಬಾಸ್ ಇತಿಹಾಸದಲ್ಲಿ ಜಗಳ ಆಡಿಕೊಂಡು ಸ್ಪರ್ಧಿಗಳು ಹೊರಬಿದ್ದ ಎರಡನೇ ಪ್ರಕರಣ ಇದಾಗಿದೆ. ಈ ಹಿಂದೆ ಹುಚ್ಚ ವೆಂಕಟ್ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದರು. ಇದೀಗ ಲಾಯರ್ ಜಗದೀಶ್ ಮನೆಯಿಂದ ಹೊರಗಡೆ ಬಂದು ಅಭಿಮಾನಿಯ ಜೊತೆ ಸೆಲ್ಫಿ ತೆಗೆದಿರುವ ಪೊಟೋ ಪಬ್ಲಿಕ್ ನೆಕ್ಸ್ಟ್ ಗೆ ದೊರಕಿದೆ.

Edited By : Suman K
PublicNext

PublicNext

16/10/2024 03:04 pm

Cinque Terre

19.87 K

Cinque Terre

3

ಸಂಬಂಧಿತ ಸುದ್ದಿ