ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಬಾಗ : 'ನಮಗೆ ಕೆಲಸ ಮಾಡಲು ಆಗುತ್ತಿಲ್ಲ, ಎಲ್ರೂ ಹಣ ಸುಲಿಗೆ ಮಾಡ್ತಿದ್ದಾರೆ' - ಗುತ್ತಿಗೆದಾರ ಆರೋಪ

ರಾಯಬಾಗ : ಪುರಸಭೆ ಸದಸ್ಯರು ನಮಗೆ ಹಣ ಕೊಡುವಂತೆ ಪೀಡಿಸುತ್ತಿದ್ದಾರೆ. ಆದರೂ ಕೂಡ ನಾವು ಅನಿವಾರ್ಯವಾಗಿ ನಮ್ಮ ಜೀವನ ನಿರ್ವಹಣೆಗಾಗಿ ಕಾಮಗಾರಿಗಳನ್ನು ಮಾಡುವ ಅನಿವಾರ್ಯತೆ ಇದೆ. ನಾವು ಬಡ್ಡಿಯಿಂದ ಹಣ ತಂದು ಕಾಮಗಾರಿ ಮಾಡಿ, ಪುನ: ಅತ್ತ ಬಡ್ಡಿನೂ ಕೊಡಬೇಕು, ಇತ್ತ ಅಧಿಕಾರಿಗಳಿಗೆ ಹಾಗೂ ಸದಸ್ಯರಿಗೂ ಹಣವನ್ನು ಕೊಡಬೇಕು. ಆದರೂ ನಮಗೆ ಸರಿಯಾಗಿ ಬಿಲ್‌ಪಾಸ್ ಆಗಲ್ಲ, ಇಂತಹ ವ್ಯವಸ್ಥೆಯಿಂದ ನಾವು ಊರು ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಬ್ ಗುತ್ತಿಗೆದಾರ ಶ್ರೀಶೈಲ ಕಡಕೋಳ ಆರೋಪಿಸಿದ್ದಾರೆ.

ಮತ್ತೊ್ಬ ಗುತ್ತಿಗೆದಾರ ಸಂಜು ದಾವಣಿ ಮಾತನಾಡಿ, ನಾನು ಪುರಸಭೆ ಮಹಡಿ ಮೇಲೆ ಹಾಗೂ ಅದರ ಪಕ್ಕದಲ್ಲಿಯೇ ಕಾರ್ಮಿಕರ ವಿಶ್ರಾಂತಿ ಗೃಹ ನಿರ್ಮಾಣ ಮಾಡಿದ್ದೇನೆ. ಕಳೆದ ಒಂದು ವಾರದ ಹಿಂದೆಯೇ ನನಗೆ ಬಿಲ್ ಪಾಸ್ ಮಾಡಿದ್ದಾರೆ. ಈಗ ಅದೇ ಕಟ್ಟಡ ಕಳಪೆಯಾಗಿದೆ ಎಂದು ನನಗೆ ಟೆಂಡರ್ ಆಗಿರುವ 15ನೇ ಹಣಕಾಸು ಯೋಜನೆಯ 19 ಲಕ್ಷ ಕಾಮಗಾರಿಯ ನೀರು ಸರಬರಾಜು ಕಾಮಗಾರಿಯ ಆದೇಶ ಪ್ರತಿ ನೀಡದಿರುವಂತೆ ಕೆಲವು ಆಡಳಿತ ಪಕ್ಷದ ಸದಸ್ಯರು ಅರ್ಜಿ ಸಲ್ಲಿಸಿದ್ದಾರೆ. ಇದು ಯಾವ ನ್ಯಾಯ ಎಂದರು.

ಪುರಸಭೆ ಸದಸ್ಯರು ಹಾಗು ಅಧಿಕಾರಿಗಳು ಕಳಪೆ ಕಾಮಗಾರಿಗೆ ಕಡಿವಾಣ ಹಾಕುತಿದ್ದಾರೆಯೋ ಅಥವಾ ತಮಗೆ ಮನ ಬಂದಂತೆ ವರ್ತಿಸುತ್ತಿದ್ದಾರೆಯೋ ಎನ್ನುವುದು ನಮಗೆ ತಿಳಿಯುತ್ತಿಲ್ಲ ಅಲ್ಲದೆ ಇಲ್ಲಿಯ ಕಿರಿಯ ಸಹಾಯಕ ಅಭಿನಂತರ ನಮ್ಮ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಗುತ್ತಿಗೆದಾರರದ್ದಾಗಿದೆ.

Edited By : Nagesh Gaonkar
PublicNext

PublicNext

15/10/2024 09:08 pm

Cinque Terre

25.78 K

Cinque Terre

0

ಸಂಬಂಧಿತ ಸುದ್ದಿ