ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಅದ್ಧೂರಿ ರಾಜ್ಯೋತ್ಸವಕ್ಕೆ ಸಕಲ ಸಿದ್ಧತೆ - ಡಿಸಿ

ಬೆಳಗಾವಿ: ಇಡೀ ರಾಜ್ಯದಲ್ಲೇ ಬೆಳಗಾವಿಯ ಕರ್ನಾಟಕ ರಾಜ್ಯೋತ್ಸವದ ಮೆರವಣಿಗೆಗೆ ತನ್ನದೇ ಆದ ಮಹತ್ವವಿದ್ದು, ನವೆಂಬರ್ 1 ರಂದೇ ಬೆಳಗಾವಿಯಲ್ಲಿ ಭವ್ಯ ಮೆರವಣಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಮೊಹ್ಮದ್ ರೋಷನ್‌ ತಿಳಿಸಿದರು.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನವೆಂಬರ್ 1 ರಂದು ಬೆಳಗಾವಿ ನಗರದಲ್ಲಿ ಭವ್ಯ ಮೆರವಣಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ವಿಶೇಷವಾಗಿ ಮಹಿಳೆಯರಿಗೆ ಮೆರವಣಿಗೆಯನ್ನು ಕುಳಿತು ನೋಡಲು ಗ್ಯಾಲರಿಗಳನ್ನು ನಿರ್ಮಿಸಲಾಗುವುದು. ಬೆಳಗಾವಿಯ ರಾಜ್ಯೋತ್ಸವದ ಮೆರವಣಿಗೆಗೆ ತನ್ನದೇ ಆದ ವಿಶೇಷತೆಯಿದ್ದು, ಈ ಬಾರಿ ನವೆಂಬರ್ 1 ರಂದು ದೀಪಾವಳಿಯಿದ್ದು, ಅಂದಿನ ದಿನವೇ ರಾಜ್ಯೋತ್ಸವದ ಮೆರವಣಿಗೆ ನಡೆಯಲಿದೆ. ರಾಜ್ಯದಲ್ಲಿ ಬೆಳಗಾವಿಯ ರಾಜ್ಯೋತ್ಸವದ ಮೆರವಣಿಗೆ ಕೇಂದ್ರ ಬಿಂದುವಾಗಿದೆ. ಈಗಾಗಲೇ ರಾಜ್ಯೋತ್ಸವಕ್ಕಾಗಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜನರ ಸಹಕಾರದೊಂದಿಗೆ ರಾಜ್ಯೋತ್ಸವವನ್ನು ಆಚರಿಸಲು ಯಾವುದೇ ಅನುದಾನದ ಅವಶ್ಯಕತೆಯಿಲ್ಲ ಎಂದರು.

Edited By : Vinayak Patil
PublicNext

PublicNext

15/10/2024 05:17 pm

Cinque Terre

14.52 K

Cinque Terre

0

ಸಂಬಂಧಿತ ಸುದ್ದಿ