ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾವಿ ದಂಡೆ ಮೇಲೆ ಕೂತು ತಾಯಿಯ ರೀಲ್ಸ್‌ ಕ್ರೇಜ್‌, ಮಗುವನ್ನು ಒಂದು ಕೈ ಯಲ್ಲಿ ಹಿಡಿದು ಶೂಟ್

ರೀಲ್ ಕ್ರೇಜ್ ನ ವಿಲಕ್ಷಣ ಘಟನೆಯೊಂದು ನೋಡುಗರಿಗೆ ಕೋಪತರಿಸುವಂತಿದೆ.‌ ಮಹಿಳಿಯೊಬ್ಬಳು ಹೆತ್ತ ಕೂಸನ್ನೇ ಬಾವಿಯ ದಂಡೆಯ ಮೇಲೆ ಕೂತು ಒಂದು ಕೈಯಲ್ಲಿ ಹಿಡಿದು ಹಾಡೊಂದಕ್ಕೆ ರೀಲ್ಸ್ ಮಾಡಿದ್ದು, ಜೀವಕ್ಕಿಂತ ರೀಲ್ಸ್‌ ಕ್ರೇಜ್‌ ಹೆಚ್ಚಾಯ್ತಾ ಅನ್ನುವ ಪ್ರಶ್ನೆ ಉದ್ಭವಿಸಿದೆ. ವೀಡಿಯೊ ಕ್ಲಿಪ್‌ನಲ್ಲಿ, ಹುಡುಗನನ್ನು ಅಸಡ್ಡೆಯಿಂದ ಹಿಡಿದುಕೊಂಡು ಕ್ಯಾಮೆರಾ ಮುಂದೆ ಪೋಸ್ ನೀಡಲು ಅವಳು ಪದೇ ಪದೇ ಕೈಗಳನ್ನು ಬದಲಾಯಿಸುತ್ತಿರುವುದು ಕಂಡುಬಂದಿದೆ.ಸಣ್ಣ ಹುಡುಗ ಬಿದ್ದು ಹೋಗುತ್ತೇನೆಂಬ ಭಯದಿಂದ ಅಮ್ಮನ ಕಾಲಿಗೆ ಅಂಟಿಕೊಳ್ಳಲು ಪ್ರಯತ್ನ ಮಾಡುತ್ತಲಿರುತ್ತಾನಾದ್ರೂ ಅಮ್ಮನ ರೀಲ್ಸ್‌ ಶೂಟ್‌ ಮುಗಿಯುವ ತನಕ ಬಾವಿಯ ಮೇಲೆ ಅದೇ ರೀತಿ ನೇತಾಡುತ್ತ ಇರುತ್ತಾನೆ.ಈ ರೀತಿ ಶೂಟ್‌ ಮಾಡಲು ಆ ಮಹಾತಾಯಿ ಎಷ್ಟು ಟೇಕ್‌ ತೆಗೆದುಕೊಂಡು ಆ ಮಗುವನ್ನು ಹಿಂಸಿಸಿದ್ದಾಳೋ ದೇವರಿಗೆ ಗೊತ್ತು. ಇಂದಿನ ಕಾಲದಲ್ಲಿ ತಾಯಿಯಾಗುವುದಕ್ಕಿಂತ ಇಂಟರ್ನೆಟ್ ಖ್ಯಾತಿ ಪಡೆದುಕೊಳ್ಳುವುದೇ ಮೂಖ್ಯವಾಗಿದೆ ಎಂದು ಎಕ್ಸ್ ‌ನಲ್ಲಿ ಕಮೆಂಟ್‌ ಗಳ ಸುರಿಮಳೆ ಬೀಳುತ್ತಿದೆ.

Edited By : Somashekar
PublicNext

PublicNext

20/09/2024 07:24 pm

Cinque Terre

46.71 K

Cinque Terre

4

ಸಂಬಂಧಿತ ಸುದ್ದಿ