ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಏಜ್‌ ಈಸ್‌ ಜಸ್ಟ್‌ ಅ ನಂಬರ್..!‌ ವಯಸ್ಸಾದ ಪುರುಷರಿಗೆ ಕಿರಿವಯಸ್ಸಿನ ಹುಡುಗಿಯರ ಮೇಲೆ ಆಕರ್ಷಣೆ ಜಾಸ್ತಿ,ಯಾಕಿರಬಹುದು?

ಪ್ರೀತಿ ಯಾವಾಗ ಯಾರಿಗೆ ಹೇಗೆ ಆಗುತ್ತೆ ಅನ್ನುವುದನ್ನು ಹೇಳುವುದು ತುಂಬಾ ಕಷ್ಟ. ವಯಸ್ಸಾದ ಪುರುಷರು ಅತೀ ಕಿರಿಯ ಹೆಣ್ಣು ಮಕ್ಕಳೊಂದಿಗೆ ಆಕರ್ಷಣೆ ಒಳಗಾಗುತ್ತಾರೆ, ಹಾಗೂ ಕಿರಿಯ ವಯಸ್ಸಿನ ಮಹಿಳೆಯರು ವಯಸ್ಸಾದ ಪುರುಷರ ಜೊತೆ ಪ್ರೀತಿಯಲ್ಲಿ ಬೀಳ್ತಾರೆ. ಯಾಕೆ ಈ ರೀತಿ ಆಗುತ್ತೆ ಅನ್ನುವ ಕಾರಣ ಅನ್ವೇಷಿಸೋಣ ಬನ್ನಿ. ಸಂಶೋಧನೆಯ ಪ್ರಕಾರ ಏಜ್‌ ಗ್ಯಾಪ್‌ ತುಂಬಾ ಇದ್ದವರ ಮಧ್ಯೆ ಆಕರ್ಷಣೆ ಜಾಸ್ತಿ ಇರುತ್ತದೆಯಂತೆ.ಜನರಿಗೆ ವಯಸ್ಸಾದಂತೆ ಸ್ನೇಹಿತರು,ಸಂಬಂಧಿಕರು ದೂರವಾಗ್ತಾರೆ, ಯಾರನ್ನೂ ನಂಬಲಾಗದ ಪರಿಸ್ಥಿತಿಗೆ ಬಂದು ಬಿಡ್ತಾರೆ,ಒಂಟಿತನ ಜೋರಾಗಿ ಕಾಡಲು ಆರಂಭವಾಗುತ್ತದೆ.ಇದೆಲ್ಲದರಿಂದ ಬಚಾವ್‌ ಆಗಲು ಪುರುಷರು ಕಿರಿಯ ವಯಸ್ಸಿನ ಹೆಣ್ಣು ಮಕ್ಕಳ ಜೊತೆ ಬೇಗನೇ ಪ್ರೀತಿಯಲ್ಲಿ ಬೀಳುತ್ತಾರೆ ಜೊತೆಗೆ ಭಾವನಾತ್ಮಕ ಸಂಪರ್ಕಕ್ಕಿಂತ ಕೆಲವರು ದೈಹಿಕ ಆಕರ್ಷಣೆಗೆ ಒಳಗಾಗಿ ಕಿರಿಯ ವಯಸ್ಸಿನ ಮಹಿಳೆಯರ ಜೊತೆ ಹೋಗ್ತಾರೆಯಂತೆ.

ಜನರು ಸ್ವಾಭಾವಿಕವಾಗಿ ತಮ್ಮ ಜೀವನದಲ್ಲಿ ಶಾಂತಿಯನ್ನು ಬಯಸುತ್ತಾರೆ. ಅವರು ವಯಸ್ಸಾದಂತೆ, ವಿವಿಧ ಒತ್ತಡಗಳು ಮತ್ತು ಅಶಾಂತಿ ಅವರನ್ನು ಸುತ್ತುವರೆದಿರಬಹುದು. ಈ ಒತ್ತಡಗಳಿಂದ ತಪ್ಪಿಸಿಕೊಳ್ಳಲು, ಅನೇಕ ಪುರುಷರು ಕಿರಿಯ ಮಹಿಳೆಯರೊಂದಿಗೆ ಸಂಬಂಧದಲ್ಲಿ ಬೀಳುತ್ತಾರೆ. ಕಾಳಜಿ ಮತ್ತು ವಾತ್ಸಲ್ಯವನ್ನು ಕಂಡುಕೊಂಡಾಗ ಕಿರಿಯ ಮಹಿಳೆಯ ಹೃದಯವನ್ನು ಗೆಲ್ಲಲು, ಪುರುಷರು ಎಲ್ಲಾ ಅಗತ್ಯ ಪ್ರಯತ್ನಗಳನ್ನು ಮಾಡಲು ಸಿದ್ಧರಿರುತ್ತಾರೆ ಎಂದು ಸಂಶೋಧನೆ ತಿಳಿಸಿದೆ.

Edited By : Somashekar
PublicNext

PublicNext

20/09/2024 07:17 pm

Cinque Terre

16.8 K

Cinque Terre

0

ಸಂಬಂಧಿತ ಸುದ್ದಿ