ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿರುತೆರೆಯಲ್ಲಿ ಹೊಸ ಅಧ್ಯಯದ ಮೂಲಕ ಧೂಳೆಬ್ಬಿಸಲು ರೆಡಿಯಾಗಿದೆ ಬಿಗ್ ಬಾಸ್ 11

ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್‌ ಬಾಸ್‌ ಈಗಾಗಲೇ ಬಹಳ ಜನಪ್ರಿಯವಾಗಿದೆ. ಈ ಬಾರಿ ಡಿಫರೆಂಟ್ ಆಗಿ ಮೂಡಿ ಬರುತ್ತಿದೆ. ಈ ವಿಷ್ಯ ಎಲ್ಲರಿಗೂ ಗೊತ್ತಿದೆ. ಆದ್ರೆ ಬಿಗ್‌ ಬಾಸ್ ಸೀಸನ್ 11ರ ಪ್ರೊಮೋ ರಿಲೀಸ್ ಆದ ಮೇಲೆ ಹೊಸ ಅಧ್ಯಾಯದ ಹವಾ ಜೋರಾಗಿದೆ.

10 ವರ್ಷದಿಂದ ಒಂದು ಲೆಕ್ಕ ಈಗಿಂದ ಬೇರೆನೇ ಲೆಕ್ಕ. ಬಿಗ್‌ಬಾಸ್ 11ರ ಮೊದಲ ಪ್ರೊಮೋದಲ್ಲಿ ಕಿಚ್ಚ ಸುದೀಪ್ ಅವರು ಇದು ಹೊಸ ಅಧ್ಯಾಯ ಅನ್ನೋ ಭರವಸೆ ಕೊಟ್ಟಿದ್ದರು. ಬಿಗ್‌ಬಾಸ್ ಸೀಸನ್ 11ರ ಪ್ರೊಮೋ ಕಿರುತೆರೆಯಲ್ಲಿ ಧೂಳೆಬ್ಬಿಸಿದೆ. ಕೇವಲ 24 ಗಂಟೆಯಲ್ಲಿ ಪ್ರೊಮೋ 20 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.

ಬಿಗ್‌ಬಾಸ್ ಸೀಸನ್ 11ರ ಪ್ರೊಮೋ ಹವಾ ಜೋರಾಗಿರುವಾಗಲೇ ಕಲರ್ಸ್‌ ಕನ್ನಡ ತಂಡದಿಂದ ಮತ್ತೊಂದು ವಿಡಿಯೋ ಬಿಡುಗಡೆ ಮಾಡಲಾಗಿದೆ. ಬಿಗ್‌ಬಾಸ್ ಪ್ರೊಮೋದ ಮೇಕಿಂಗ್ ವಿಡಿಯೋವನ್ನು ರಿಲೀಸ್ ಮಾಡಲಾಗಿದ್ದು, ಕಿಚ್ಚ ಸುದೀಪ್‌ನ ಖಡಕ್ ಲುಕ್‌ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಕಲರ್ಸ್ ಕನ್ನಡ ಚಾನೆಲ್‌ 1 ನಿಮಿಷ 50 ಸೆಕೆಂಡ್ ವಿಡಿಯೋ ರಿಲೀಸ್ ಮಾಡಿದೆ. ಬಿಗ್‌ಬಾಸ್ ಪ್ರೊಮೋ ಮೇಕಿಂಗ್ ವಿಡಿಯೋ ಇದಾಗಿದ್ದು, ಈ ಬಾರಿ ಹೊಸ ಅಧ್ಯಾಯ ಅನ್ನೋದಕ್ಕೆ ಇದು ಸಾಕ್ಷಿಯಾಗಿದೆ. ಅಭಿಮಾನಿಗಳು ಸೆಪ್ಟೆಂಬರ್‌ 29ರಿಂದ ಶುರುವಾಗುವ ಬಿಗ್‌ಬಾಸ್ ಸೀಸನ್ 11ಕ್ಕಾಗಿ ತುದಿಗಾಲಲ್ಲಿ ಕಾಯುತ್ತಿದ್ದಾರೆ.

Edited By : Somashekar
PublicNext

PublicNext

20/09/2024 01:05 pm

Cinque Terre

50.4 K

Cinque Terre

0

ಸಂಬಂಧಿತ ಸುದ್ದಿ