ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಗ್ ಬಾಸ್‌ಗೆ ಹೋಗ್ತಾರಾ ಅವಳಿ ಸಹೋದರಿಯರು?ಸ್ಪಷ್ಟನೆ ನೀಡಿದ ಅದ್ವಿತಿ ಶೆಟ್ಟಿ

ಬಿಗ್ ಬಾಸ್ ಸೀಸನ್ 11ಕ್ಕೆ ಇಗಾಗಲೇ ಕ್ಷಣಗಣೆ ಆರಂಭವಾಗಿ ವೇದಿಕೆ ಸಿದ್ಧವಾಗುತ್ತಿದ್ದಂತೆ ಹಲವರ ಹೆಸರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಅದರಲ್ಲಿ ಅದ್ವಿತಿ ಮತ್ತು ಅಶ್ವಿತಿ ಶೆಟ್ಟಿ ದೊಡ್ಮನೆಗೆ ಬರಲಿದ್ದಾರೆ ಎಂಬ ಮಾತುಗಳು ಕೇಳಿ ಬತ್ತಾ ಇತ್ತು ಅದಕ್ಕೆಲ್ಲಾ ನಟಿ ಅದ್ವಿತಿ ಉತ್ತರ ನೀಡಿದ್ದಾರೆ. ನಾವು ಬಿಗ್ ಬಾಸ್‌ಗೆ ಹೋಗ್ತೀವಿ ಅಂತ ನೀವೇ ನಿರ್ಧರಿಸಲು ಹೋಗಬೇಡಿ ಎಂದು ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ.

ಕಳೆದ ಹಲವು ಸೀಸನ್‌ಗಳಿಂದ ಬಿಗ್ ಬಾಸ್‌ಗೆ ಹೋಗುವ ಕುರಿತು ಈ ಅವಳಿ ಸಹೋದರಿಯರ ಹೆಸರು ಕೇಳಿ ಬರುತ್ತಲೇ ಇದೆ. ಪ್ರತಿ ಸೀಸನ್ ಬಂದಾಗಲೂ ಹೆಸರು ಸದ್ದು ಮಾಡುತ್ತದೆ. ಈ ಬಾರಿಯೂ ಹಾಗೇ ಆಗಿದೆ. ಅದಕ್ಕೆ ಇನ್ಸ್ಟ್ರಾಗ್ರಾಂ ಸ್ಟೋರಿ ಶೇರ್ ಮಾಡಿ,

ಎಲ್ಲರಿಗೂ ನಮಸ್ಕಾರ, ನಾನು ಹಲವು ಪೋಸ್ಟ್‌ಗಳನ್ನು ನೋಡಿದೆ, ಬಿಗ್ ಬಾಸ್‌ಗೆ ಈ ಬಾರಿ ನಾವಿಬ್ರು ಹೋಗುವ ಕುರಿತು. ನಾವು ಅಧಿಕೃತವಾಗಿ ಸ್ಪಷ್ಟನೆಕೊಡುವವರೆಗೆ ಯಾರು ಕೂಡ ಸುಳ್ಳು ಸುದ್ದಿಯನ್ನು ಹರಡಬೇಡಿ . ನಾನೇ ಹೇಳುವವರೆಗೂ ದಯವಿಟ್ಟು ಕಾಯಿರಿ , ನೀವೇ ಕಲ್ಪನೆ ಮಾಡಿಕೊಳ್ಳಲು ಹೋಗಬೇಡಿ ಎಂದಿದ್ದಾರೆ ನಟಿ ಅದ್ವಿತಿ. ಧನ್ಯವಾದಗಳು ನಮ್ಮನ್ನು ಹೀಗೆ ಬೆಂಬಲಿಸುತ್ತಾ ಇರಿ ಎಂದು ಮನವಿ ಮಾಡಿದ್ದಾರೆ.

Edited By : Somashekar
PublicNext

PublicNext

20/09/2024 12:57 pm

Cinque Terre

11.84 K

Cinque Terre

0